ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ರಾಜ್ಯಮಟ್ಟದ ಟೆನಿಸ್ ನಲ್ಲಿ ಯಾದಗಿರಿಯ ಮಲ್ಲಿಕಾರ್ಜುನ ಯಾದವ್ ರಾಜ್ಯಕ್ಕೆ ಪ್ರಥಮ, ಡಬ್ಬಲ್ಸ್ ನಲ್ಲಿ ಸೆಮಿಸ್ ಸಾಧನೆ ಯಾದಗಿರಿ ಟೈಮ್ಸ್ ವಾರ್ತೆ | 17.12.24 ಯಾದಗಿರಿ: ದಾವಣಗೆರೆಯಲ್ಲಿ ಜರುಗಿದ ಕರ್ನಾಟಕದ ರಾಜ್ಯ ಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿಯಲ್ಲಿ ಯಾದಗಿರಿಯ ಮಲ್ಲಿಕಾರ್ಜುನ್ ಯಾದವ್ 35+ ವರ್ಷದ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಟ್ರೊಫಿ ತಮ್ಮದಾಗಿಸಿಕೊಂಡಿದ್ದಾರೆ.  ಡಿಸೆಂಬರ್ 13-15 ರಂದು ಎರಡು ದಿನಗಳ ಕಾಲ ಜರುಗಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಯಾದಗಿರಿಗೆ ಕೀರ್ತಿ ತಂದಿದ್ದಾರೆ.  ಇದಲ್ಲದೇ ಡಬ್ಬಲ್ಸ್ ಪಂದ್ಯಾವಳಿಯಲ್ಲಿ ಜಗದೀಶ್ ಹೆಂದೆ ಹಾಗೂ ಮಲ್ಲಿಕಾರ್ಜುನ್ ಯಾದವ್ ಅವರು 35 + ವಯೋಮಾನದವರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಮಟ್ಟಕ್ಕೇರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.  ಹರ್ಷ: ರಾಜ್ಯದ ವಿವಿಧೆಡೆಯಿಂದ ಸುಮಾರು 400ಕ್ಕೂ ಮಿಕ್ಕಿ ಆಟಗಾರರು ಭಾಗವಹಿಸಿದ್ದ ಮಹತ್ವದ ಪಂದ್ಯಾವಳಿಯಲ್ಲಿ ಯಾದಗಿರಿಗೆ ಪದಕ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಉಭಯ ಆಟಗಾರರ ಸಾಧನೆಗೆ ಯಾದಗಿರಿ ಟೆನ್ನಿಸ್ ಕ್ಲಬ್ ಪರವಾಗಿ ಡಾ. ಪ್ರದೀಪರಡ್ಡಿ ಹರ್ಷ ವ್ಯಕ್ತಪಡಿಸಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
ಇಮೇಜ್
 ಜಿಲ್ಲಾ ಕಶಸಾಪಗಳಿಂದ ಅಭಿನಂದನಾ ಸ್ವೀಕರಿಸಿದ ಗೋರುಚ ಉವಾಚ;  ಮಾನವ ಪೋಷಕವಾಗಬೇಕಿದ್ದ ಧರ್ಮ, ಸಮಾಜ, ರಾಜಕೀಯ ವ್ಯವಸ್ಥೆಗಳು ಮಾರಕವಾಗಿವೆ ಇದಕ್ಕೆ ಸಾಹಿತ್ಯ, ಸಂಸ್ಕೃತಿಯೇ ಮದ್ದು:  ಯಾದಗಿರಿ: ಧರ್ಮ, ಸಮಾಜ ಮತ್ತು ರಾಜಕೀಯ ವ್ಯವಸ್ಥೆಗಳು ಮಾನವ ಅಸ್ತಿತ್ವಕ್ಕೆ ಪೊಷಕವಾಗಿ ನಿಲ್ಲಬೇಕಾದವುಗಳು ಇಂದಿನ ದಿನಮಾನಗಳಲ್ಲಿ ಮಾರಕಗಳಾಗಿ ನಿಂತAತಿವೆ ಎಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ   ಪ್ರೊ|| ಗೋರೂ ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.  ನಗರದ ಕಸಾಪ ಭವನದಲ್ಲಿ ರವಿವಾರ ಬೆಳಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  ದೇಶ ರಾಜ್ಯದಲ್ಲಿ ಇಂದು ವರ್ಗ ಸಂಘರ್ಷಗಳು, ಆರ್ಥಿಕ ಸಂಘರ್ಷಗಳು, ಭಯೋತ್ಪಾದನೆ, ಹೆಣ್ಣಿನ ಮೇಲೆ ಅತ್ಯಾಚಾರ, ಧರ್ಮಗುರುಗಳ ಕರ್ಮಕಾಂಡ, ರಾಜಕೀಯ ಅನೈತಿಕತೆ, ಅಧಿಕಾರ ದುರುಪಯೋಗ, ಉಳ್ಳವರ ಆಡಂಬರ, ಇಲ್ಲದವರ ಸಂಕಟಗಳು ಹೆಚ್ಚುತ್ತಲೇ ಇವೆ ಇಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಇಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ನಡೆಯುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.  ಇಂತಹ ವಿಷಮ ಪರಿಸ್ಥಿತಿಗೆ ಸಾಹಿತ್ಯ ಪರಿಹಾರ ಹುಡುಕಬಲ್ಲದು ಜನತೆ ಸುಸಂಸ್ಕೃತರಾದಲ್ಲಿ ಇಂತ...
ನವ ವಿವಾಹಿತರಿಗೆ ಸಮಸ್ಯೆ:  ವಕ್ಫ್  ಮಂಡಳಿ ಕಾರ್ಯವೈಖರಿಗೆ ಮುಸ್ಲಿಂ  ಸ ಮಾಜಿಕರಿಂದಲೇ ಆಕ್ರೋಶ ಯಾದಗಿರಿ ಟೈಮ್ಸ್ ವಿಶೇಷ | 14.11.24 (ವೈಜನಾಥ ಹಿರೇಮಠ) ಯಾದಗಿರಿ: ವಕ್ಫ್ ಕಮೀಟಿ ವಿವಾದ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದರ ಮದ್ಯೆಯೇ ಮುಸ್ಲಿಂ ಸಮುದಾಯದವರ ವಿವಾಹ ಕಾರ್ಯಕ್ಕೂ ಪ್ರಮಾಣ ಪತ್ರ ನೀಡಬೇಕಾದ ವಕ್ಫ್ ಕಮೀಟಿ ತನ್ನ ಕೆಲಸ ಸರಿಯಾಗಿ ಮಾಡದೇ ಮಾಡಬಾರದ ಕೆಲಸದಲ್ಲಿ ನಿರತವಾಗಿದೆ ಎಂಬ ಸಂಗತಿ ಈದೀಗ ಬೆಳಕಿಗೆ ಬಂದಿದೆ. ಹೌದು, ರಾಜ್ಯಾದ್ಯಂತ ವಕ್ಫ್ ಕಮೀಟಿಯಿಂದ ಕಂಡ ಕಂಡ ಜಮೀನು ತನ್ನದೆಂದು ಹೇಳಿಕೊಂಡು ಆಪೋಷನ ಮಾಡುತ್ತಿರುವ ವಕ್ಫ್ ಗೆ ತನ್ನ ಕೆಲಸವನ್ನು ಸಹ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ಸ್ವತಃ ಮುಸ್ಲಿಂ ಸಮುದಾಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಮದುವೆಯಾಗುವ ಮುಸ್ಲಿಂ ಸಮುದಾಯದವರು ಒಂದೊ ವಕ್ಫ್ ನಿಂದ ನಿಯುಕ್ತಿಗೊಂಡ ಖಾಜಿಗಳಿಂದ ಮದುವೆ ಪ್ರಮಾಣ ಪತ್ರ ಪಡೆಯಬೇಕು ಇಲ್ಲವೇ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ವಿವಾಹ ಪ್ರಮಾಣಪತ್ರ ಪಡೆಯಬೇಕು. ಇವುಗಳ ಪೈಕಿ ವಕ್ಫ್ ನಿಂದ ಪಡೆಯುವ ಪ್ರಮಾಣ ಪತ್ರ ವಿಶೇಷವಾಗಿ ವಿದೇಶಕ್ಕೆ ಉದ್ಯೋಗಾಕಾಂಕ್ಷಿಗಳಾಗಿ ತೆರಳುವವರಿಗೆ ಪ್ರಮುಖ ಮಾನದಂಡವಾಗಿದೆ. ಆದರೆ ಈದೀಗ ಸರ್ಕಾರದಿಂದ ನೇಮಕಗೊಂಡ ಖಾಜಿಗಳು ನಿವೃತ್ತಿಹೊಂದಿದ್ದಾರೆ ಅಳಿದುಳಿದವರು ಹೊರಹೋಗುವ ಹಂತದಲ್ಲಿದ್ದು, ಬಹುತೇಕೆಡೆಗಳಲ್ಲಿ ಖಾಜಿಗಳೇ ಇಲ್ಲ. ಹೀಗಾಗಿ ಸಮುದಾಯದವರಿಗೆ ಅನುಕೂಲವಾಗಲಿ ಎಂಬ ಕಾರಣಕ...
 ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯಿಂದ ನ. 14      ರಂದು ಯರಗೋಳದಲ್ಲಿ ಭವ್ಯ ರಾಜ್ಯೋತ್ಸವ ಸಮಾರಂಭ ಯಾದಗಿರಿ ಟೈಮ್ಸ್ ವಾರ್ತೆ 13.11.24 ಯಾದಗಿರಿ: ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯರಗೋಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯರಗೋಳ ಕನ್ನಡಿಗರ ವೈಭವ ಸಮಾರಂಭ ತಾಲ್ಲೂಕಿನ ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇದೇ ನವೆಂಬರ್ 14 ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ತಾಪೂರದ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಪರಮಪೂಜ್ಯ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ವಹಿಸಲಿದ್ದಾರೆ. ಸಮ್ಮುಖವನ್ನು ಬೆಂಗಳೂರಿನ ಶ್ರೀಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷರಾದ ಬ್ರಹ್ಮಚಾರಿ ಆತ್ಮಾನಿರತಾಮೃತ ಚೈತನ್ಯ, ಯರಗೋಳ ಗವಿಸಿದ್ದಲಿಂಗೇಶ್ವರ ವಿರಕ್ತಮಠದ ಶ್ರೀ ಪರಮಪೂಜ್ಯ ಸಂಗಮೇಶ್ವರ ದೇವರು ಆಗಮಿಸುವರು. ಅಧ್ಯಕ್ಷತೆಯನ್ನು ಸೇವಾ ಸಮಿತಿ ಅದ್ಯಕ್ಷರಾದ ಶಿವರಾಜ ಮಾನೇಗಾರ ವಹಿಸುವರು, ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಉತ್ತರಾದೇವಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಗುರುಮಕಲ್ ಶಾಸಕ ಶರಣಗೌಡ ಕಂದಕೂರು, ಕೆಪಿಸಿಸಿ ಸದಸ್ಯ ಶರಣಪ್ಪ ಡಿ. ಮಾನೇಗಾರ, ಇಬ್ರಾಹಿಂಪುರದ ಶ್ರೀಸಾಯಿ ಮಂದಿರದ ಅಧ್ಯಕ್ಷ ಮಹಾರಾಜ ದಿಗ್ಗಿ, ಗ್ರಾಪಂ ಅದ್ಯಕ್ಷ ರಾಮಲಿಂಗಪ್ಪ ಅಲ್ಲಿಪೂರ, ಗ್ಯಾರೆಂಟಿ...
ಇಮೇಜ್
 ಶೇಂಗಾ ಬೆಳೆಯ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ, ಲಾಭ ಪಡೆಯಲು ಸಾಧ್ಯ: ರವೀಂದ್ರ ಬೈಟಿಪುಲಿ ಯಾದಗಿರಿ: ಶೇಂಗಾ ಬೆಳೆಯ ಆಧುನಿಕ ತಾಂತ್ರಿಕತೆಗಳು ಆಳವಡಿಸಿಕೊಂಡು ಹೆಚ್ಚಿನ ಇಳುವರಿ ಮತ್ತು ಲಾಭ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರವೀಂದ್ರ ಬೈಟಿಪುಲಿ ತಿಳಿಸಿದರು.  ಕಲಿಕೆ ಟಾಟಾ ಟ್ರಸ್ಟ್ಸ್, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಯಾದಗಿರಿ ಇವರ ಸಹಯೋಗದಲ್ಲಿ ತಾಲ್ಲೂಕಿನ ಕ್ಯಾಸಪನಳ್ಳಿ ಗ್ರಾಮದ ರಾಜು ತಂದೆ ಹಣಮಂತ ಇವರ ಕ್ಷೇತ್ರ (ಹೊಲ)ದಲ್ಲಿ ಆಯೋಜಿಸಿದ್ದ ಶೇಂಗಾ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  ಶೇಂಗಾ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಬೀಜ ತಳಿಗಳ ಆಯ್ಕೆ, ಬೀಜೋಪಚಾರ, ಬೀಜದ ಪ್ರಮಾಣ, ಬಿತ್ತುವ ಸಮಯ, ಅಂತರ, ಕಳೆ ಮತ್ತು ನೀರು ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ರಸ ಗೊಬ್ಬರಗಳ ಆಯ್ಕೆ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು.  ಯಾದಗಿರಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಡಾ.ರಾಜಕುಮಾರ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳಿಂದ ಆರ್ಥಿಕವಾಗಿ ಕೃಷಿಯನ್ನು ಲಾಭದಾಯಕ ವಾಗಿಸಿಕೊಳ್ಳಬೇಕು ಅದರಲ್ಲೂ ಕಲ್ಲಂಗಡಿ ಹಣ್ಣಿನ ಬೆಳೆ ಬೆಳೆದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆ ಕುರಿ...
ಇಮೇಜ್
 ಒನಕೆ ಓಬವ್ವ ಜಯಂತಿ: ವಿಧ್ಯಾರ್ಥಿಗಳಿಗೆ ಶಬ್ದಕೋಶ, ನೋಟ್ ಪುಸ್ತಕ ವಿತರಣೆ ಕಲ್ಬುರ್ಗಿ: ಒನಕೆ ಓಬವ್ವ ಜಯಂತಿ ಅಂಗವಾಗಿ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿಕಲಚೇತನ ನಿವೃತ್ತ ಪೊಲೀಸ್ ಖಾಜಾ ಫರಿದುದ್ದೀನ್ ದೇಣಿಗೆ ನೀಡಿದರು. ವೀರವನಿತೆ ಒನಕೆ ಓಬವ್ವ ಜಯಂತಿಯAದು ಬೀದರ ಜಿಲ್ಲೆಯ ಹಳ್ಳಿಖೇಡ ಕೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಅವರು ವಿದ್ಯಾರ್ಥಿಗಳಿಗೆ ಶಬ್ದಕೋಶಗಳ ಪುಸ್ತಕ ಹಾಗೂ ನೋಟಬುಕ್ ಉಚಿತವಾಗಿ ವಿತರಿಸಿದರು. ಈ ಹಿಂದೆ ಅವರು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ತಮ್ಮ ನಿವೃತ್ತಿ ವೇತನದ ಅರ್ದದಷ್ಟು ಹಣವನ್ನು ಕಡುಬಡ ಸರ್ಕಾರಿ ಶಾಲಾ ಮ ಕ್ಕಳಿಗೆ ನಿರಂತರವಾಗಿ ವಿತರಿಸುತ್ತಾ ಬರುತ್ತಿದ್ದಾರೆ.
ಇಮೇಜ್
 ರೈತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಕುಂಬಾರ ನೇಮಕ ಯಾದಗಿರಿ: ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಕುಂಬಾರ ಇವರನ್ನು ನೇಮಕ ಮಾಡಲಾಗಿದೆ.  ಈ ಕುರಿತು ನೇಮಕ ಆದೇಶವನ್ನು ಹಸ್ತಾಂತರಿಸಿದ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ರಾಜ್ಯಾಧ್ಯಕ್ಷ ಶಾಂತಗೌಡ ಆದೇಶದ ಮೇರೆಗೆ ರಾಜ್ಯ ಉಪಾಧ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಇವರ ಶಿಫಾರಸಿನ ಮೇರೆಗೆ ನೇಮಕ ಮಾಡಲಾಗಿದೆ.  ಕೂಡಲೇ ಜವಬ್ದಾರಿ ವಹಿಸಿಕೊಂಡು ಸಂಘಟನೆ ಬಲಪಡಿಸಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿ ಆದೇಶ ನೀಡಿದರು.  ಈ ಸಂದರ್ಭದಲ್ಲಿ ರೈತ ಸೇನೆ ಮುಖಂಡರು ಇದ್ದರು.
ಇಮೇಜ್
ತಿಳಿದು ಭಕ್ತಿಯ ಮಾಡಬೇಕು ಎಂದು ಪವಾಡಗಳ ಮೂಲಕ ಜಾಗೃತಿ ಮೂಡಿಸಿದ್ದರು ವಿಶ್ವಾರಾಧ್ಯರು: ಪಂ. ಬಸವರಾಜ ಶಾಸ್ತಿç ಎಲೆಕೂಡ್ಲಿಗಿ ಯಾದಗಿರಿ ಟೈಮ್ಸ್ ವಾರ್ತೆ |  13.11.24 ಯಾದಗಿರಿ: ಅಸಮಂಜಸ ಆ ಚಾರ ಬೇಡ, ದೇವರ ಮುಂದೆ ಸಕ್ಕರೆ, ತುಪ್ಪ, ಹಾಲು ಹಾಕಿ ಗಲಿಜು ಮಾಡಬೇಡಿ ತಿಳಿದು ಆಚರಣೆ ಮಾಡಬೇಕು ವಿಚಾರವಿಲ್ಲದ ಆಚಾರ ಸರಿಯಲ್ಲ ಎಂಬ ವಿಚಾರಗಳನ್ನು ವಿಶ್ವಾರಾಧ್ಯರು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ತಮ್ಮ ಪವಾಡಗಳ ಮೂಲಕ ಮಾಡಿದರು ಎಂದು ಪ್ರವಚನಕಾರ ವೇ||ಮೂ|| ಬಸವರಾಜ ಶಾಸ್ತಿç ಎಲೆಕೂಡ್ಲಿಗಿ, ಶಹಾಪೂರ ಹೇಳಿದರು. ಇಲ್ಲಿನ ಲಕ್ಷಿö್ಮÃನಗರದ ಶ್ರೀ ಲಕ್ಷಿö್ಮÃ ಮಾರುತಿ ದೇವಸ್ಥಾನ ಆವರಣದಲ್ಲಿ ಗೌರಿಹುಣ್ಣಿಮೆ ಅಂಗವಾಗಿ ನಡೆಯುತ್ತಿರುವ ಶ್ರೀವಿಶ್ವಾರಾಧ್ಯ ಪುರಾಣ ಪ್ರವಚನ ಕಾರ್ಯ ನೆಡೆಸಿಕೊಟ್ಟು ಮಾತನಾಡಿದ ಅವರು, ಘನಪಂಡಿತ ವಿಶ್ವಾರಾಧ್ಯರು ಅಣಿಮಾದಿ ಅಷ್ಟ ಸಿದ್ದಿಗಳನ್ನು ಪಡೆದ ಮಹಾತ್ಮರಾಗಿದ್ದರು. ಅಣಿಮಾದಿ ಅಷ್ಟಸಿದ್ದಿಗಳನ್ನು ತ್ರೇತಾಯುಗದಲ್ಲಿದ್ದ ಆಂಜನೇಯ ಸ್ವಾಮಿ ಹೊಂದಿದ್ದAತಹ ವಿಶೇಷ ಜ್ಞಾನವನ್ನು ವಿಶ್ವಾರಾಧ್ಯರು ಹೊಂದಿದ್ದರು ಎಂದು ನುಡಿದರು.  ವಿಶ್ವಾರಾಧ್ಯರು ತಮ್ಮ ಜೀವಿತಾವಧಿಯುದ್ದಕ್ಕೂ ಅನೇಕ ಲೀಲೆಗಳು, ಪವಾಡಗಳಿಂದ ಜನರನ್ನು ಉದ್ಧರಿಸಿ ಅವರ ಬೇಕು ಬೇಡ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ ನಡೆದಾಡಿದ ದೇವರಾಗಿ ಅಪಾರ ಲೀಲೆ ತೋರಿದರು ಎಂದು ವಿವರಿಸಿದರು.  ಉಣ್ಣದ ಲಿಂಗಕ್ಕೆ ಬೊನವ ಹಿಡಿಯಬೇಡಿ ಉಣ್ಣುವ...
 ಹೈ,ಸುಪ್ರೀಂ ಆದೇಶಗಳ ಉಲ್ಲಂಘನೆ ಮಾಡುತ್ತಿರುವ ಆಡಳಿತಗಳು  ವಕ್ಫ್ ಮಂಡಳಿಯಿAದ ಜಿಲ್ಲೆಯ 1440 ರೈತರ ಆಸ್ತಿಗಳು ಸ್ವಾಹ ಮತಬ್ಯಾಂಕ್ ರಾಜಕೀಯ ಆಡಂಬೋಲಗಳಾದ ಅಧಿಕಾರಿಗಳು   ಮಂಡಳಿ ಹೆಸರಿನಲ್ಲಿ ರೈತರ ಜಮೀನಿಗೂ ಬಾಯಿ ಹಾಕುತ್ತಿರುವ ವಕ್ಫಾಸುರ ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಬೀದಿಗೆ ಬರುವನೇ ಅನ್ನದಾತ? ಯಾದಗಿರಿ ಟೈಮ್ಸ್ ವಿಶೇಷ (ವೈಜನಾಥ ಹಿರೇಮಠ) ಯಾದಗಿರಿ: ದೇಶಾದ್ಯಂತ ವಿದಾನಸೌಧ, ಹೊಸ ಪಾರ್ಲಿಮೆಂಟ್ ಭವನ ಸೇರಿದಂತೆ ಸಾವಿರಾರು ಆಸ್ತಿಗಳೆಲ್ಲವೂ ತನ್ನದೆಂದು ಪ್ರತಿಪಾದಿಸುತ್ತಿರುವ ಮಂಡಳಿ ಹೆಸರಿನಲ್ಲಿ ವಕ್ಫಾಸುರ ಈದೀಗ ರೈತರ ಜಮೀನಿಗೂ ಬಾಯಿ ಹಾಕಿದ್ದು, ದೇಶದಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯದ ಸಂಘರ್ಷ ಏರ್ಪಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ವಕ್ಫಾಸುರ ತನ್ನ ಕಬಂಧ ಬಾಹುಗಳನ್ನು ಈದೀಗ ರೈತರ ಜಮೀನಿನ ಕಡೆ ಚಾಚುತ್ತಿರುವುದು ಸ್ಪಷ್ಟವಾಗಿದೆ.  ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಇಂತಹ ಕೃತ್ಯಗಳು ನಡೆದು ತಾರಕಕ್ಕೇರುತ್ತಿವೆ ಎಂದು ರೈತ ಸಂಘಟನೆ ಆರೋಪಿಸುತ್ತಿದೆ.  ಇದಕ್ಕೊಂದು ತಾಜಾ ಉದಾಹರಣೆ ಎಂಬAತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಒಕ್ಫ್ ಮಂಡಳಿಯು 1440 ಆಸ್ತಿಗಳಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಕಲಂ ನಂಬರ್ 11 ರಲ್ಲಿ ನಮೂದಿಸಿ ಸುಪ್ರಿಂಕೋರ್ಟ್ ಹಾಗೂ ಕಲ್ಬುರ್ಗಿ ವಿಭಾಗೀಯ ಹೈಕೋರ್ಟ ಪೀಠಗಳ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಅಧಿಕಾರಿ...
ಇಮೇಜ್
 ಸಮಾಜ ಸಂಘಟನೆಗೆ ಒತ್ತು ನೀಡಿ; ಶಂಕರ ಬಿದರಿ, ಶಾಸಕ ಕಂದಕೂರು  ಜಾತಿ ಉಪಜಾತಿ ನಮೂದು ಕಾರಣದಿಂದ ಗಣತಿ ಪಟ್ಟಿಯಲ್ಲಿ ವೀರಶೈವ  ಧರ್ಮದ ಜನಸಂಖ್ಯೆಯಲ್ಲಿ ಇಳಿಮುಖ: ದರ್ಶನಾಪೂರ ಕಳವಳ  ಯಾದಗಿರಿ: ಸಾಮಾಜಿಕ ಆರ್ಥಿಕ ಗಣತಿ ಸಂದ ರ್ಭದಲ್ಲಿ ಜಾತಿಯನ್ನು ಹಿಡಿದುಕೊಂಡು ಧರ್ಮವನ್ನು ನಿರ್ಲಕ್ಷಿಸಿದ ಕಾರಣ ವೀರಶೈವ ಲಿಂಗಾಯತ ಧರ್ಮದ ಸಂಖ್ಯೆ ತೀರ ಕಮ್ಮಿಯಾಗಿದೆ. ಇದು ಹಿಗೆ ಮುಂದುವರೆದರೆ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು.  ನಗರದ ಹೊರಭಾಗದ ಸಪ್ತಪದಿ ಕನ್ವೆನ್ಷನ್ ಹಾಲ್ ನಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವನ್ನು ಹಿಡಿದುಕೊಂಡು ಹೋದರೆ ಒಗ್ಗಟ್ಟು ಉಳಿಯುತ್ತದೆ ಬಲ ಬರುತ್ತದೆ. ಆದರೆ ವೀರಶೈವ ಧರ್ಮದಲ್ಲಿನ ಎಲ್ಲ ಪಂಗಡದವರು ತಮ್ಮ ಜಾತಿಯನ್ನು ಮುಖ್ಯವಾಗಿಟ್ಟುಕೊಂಡು ಗಣತಿ ವೇಳೆ ಬರೆಸಿದ ಪರಿಣಾಮ ವೀರಶೈವ ಧರ್ಮದವರ ಜನಸಂಖ್ಯೆ ಸಹಜವಾಗಿಯೇ ಕಡಿಮೆ ತೋರಿಸುತ್ತಿದೆ ಎಂದು ನುಡಿದರು. ಆನಸಂಖ್ಯೆ ಕಡಿಮೆಯಾದರೆ ಸಹಜವಾಗಿ ಬಲ ಕಡಿಮೆಯಾಗುತ್ತದೆ ಎಂದು ನುಡಿದರು.  ಜಿಲ್ಲಾ ಕೇಂದ್ರಕ್ಕೆ 2 ಎಕರೆ ಜಾಗ ಮಂಜೂರು ಮಾಡಲು ಕ್ರಮ ಕೈಗೊಳ್ಳುವೆ, ಸಂಪುಟದಿAದ ಅನುಮೋದನೆ ಕೊಡಿಸುವೆ ಸಮಾಜದ ಏಳ್ಗೆಗೆ ಬೆನ್ನೆಲುಬಾಗಿರುತ್ತೆನೆ, ಹಾಸ್ಟಲ್ ಕಟ್ಟಡ ಕ್ಕೆ ಕ್ರಮ ಕೈಗೊಳ್ಳಲಾಗುವುದು, ರ...
ಇಮೇಜ್
ವಕ್ಫ್ ಆಸ್ತಿಗಳ ಪರಭಾರೆ: ಆದೇಶ ಹಿಂಪಡೆಯಲು ಡಿಸಿಗೆ ಲಕ್ಷಿö್ಮÃಕಾಂತ ಮದ್ದರಕಿ ಆಗ್ರಹ ಯಾದಗಿರಿ: ಜಿಲ್ಲಾಧಿಕಾರಿಗಳು ಪಹಾಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಭೂಮಿಗಳನ್ನು ವಕ್ಫ್ ಗೆ ನೀಡುವಂತೆ ತಹಸೀಲ್ದಾರುಗಳಿಗೆ ಮಾಡಿದ ಆದೇಶ ಹಿಂಪಡೆಯುವAತೆ ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಮಾತನಾಡಿ, ಯಾದಗಿರಿ ಡಿಸಿಯವರು ಕಳೆದ ತಿಂಗಳು, ದಿ: 05-09-2024 ರಂದು ಹೊರಿಡಿಸಿದ ಆದೇಶ (ಸಂಖ್ಯೆ: ಸಂ/ಕA/ಭೂಮಿ/18/2024-25) ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿ ಇರುವ ಪಹಾಣಿಗಳ ಪ್ರಕಾರ ಪರಭಾರೆ ಮಾಡಬಾರದೆಂದು ಆದೇಶ ಮಾಡಿರುವುದು ಸರಿಯಲ್ಲ. ಇದು ಸುಪ್ರೀಂ ಹಾಗೂ ಹೈಕೋರ್ಟ್ ಆದೇಶಗಳಿಗೆ ಅಪಚಾರ ವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಆದೇಶ ಹಿಂಪಡೆಯುವAತೆ ಆಗ್ರಹಿಸಿದ್ದಾರೆ.  ಮತ್ತು ಇದನ್ನು ಧಾರ್ಮಿಕ ಕಟ್ಟಡಗಳು ಇರುವಂತಹ ಸ್ಥಳಗಳನ್ನು ಸರ್ವೇ ಮಾಡಬೇಕು ಮತ್ತು ಕಟ್ಟಡಗಳಿಗೆ ಸೀಮಿತಗೊಳಿಸಿ ಆದೇಶವನ್ನು ಮಾರ್ಪಾಡು ಮಾಡಬೇಕು ಮತ್ತು ಹಾಲಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು., ವಿಜಯಪುರದಲ್ಲಿ 1200 ಎಕರೆ ಪ್ರದೇಶದ ರೈತರ ಆಸ್ತಿಯ ಮೇಲೆ ವಕ್ಫ್ ಸಚಿವನ ಮೌಖಿಕ ಆದೇಶದ ಮೇರೆಗೆ ಮಂಡಳಿ ಕಣ್ಣು ಹಾಕಿದ್ದಲ್ಲದೇ ನೋಟೀಸ್ ಜಾರಿ ಮಾಡಿರುವುದು ಮೊಘಲರ ದಬ್ಬಾಳಿಕೆಯನ್ನು ನೆನಪಿಸುವಂತಿದೆ. ಎಂದು ಅವರು ಆಕ್ರೋಶ ವ್ಯಕ್ತಪಡಿ...

ನಿಲ್ಲದ 13 ಕ್ಕೂ ಹೆಚ್ಚು ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಿ, ರೈಲ್ವೆ ಬೇಡಿಕೆಗಳು ಈಡೇರಿಸಿ: ಟಿಎನ್‌ಭೀ

ಯಾದಗಿರಿ: ಜಿಲ್ಲೆಯಾಗಿ 14 ವರ್ಷಗಳೇ ಕಳೆದರೂ ನಗರದಲ್ಲಿ ಸರಿಸುಮಾರು 13ಕ್ಕೂ ಹೆಚ್ಚು ರೈಲುಗಳ ನಿಲುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ ಕೂಡಲೇ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.  ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ, ಯಾದಗಿರಿ ಜಿಲ್ಲೆಯಾಗಿ ಸುದೀರ್ಘ ಅವಧಿ ಕಳೆದರೂ ಸಹ ರೈಲ್ವೆ ಇಲಾಖೆ ಇನ್ನು ಇತ್ತ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈಲ್ವೆ ನೂತನ ಸಚಿವ ವಿ. ಸೋಮಣ್ಣನವರು ಈ ಭಾಗದ ದೀರ್ಘ ಕಾಲದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.  ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್(22691/22692), ಪದ್ಮಾವತಿ ಎಕ್ಸ್ಪ್ರೆಸ್ (12731/12732), ರಾಜಕೋಟ್ ಎಕ್ಸ್ಪ್ರೆಸ್ (16613/16641), ದ್ವಾರಕಾ ಎಕ್ಸ್ಪ್ರೆಸ್ (19567/19568), ವಾಸ್ಕೋ ಎಕ್ಸ್ಪ್ರೆಸ್ (17321/17322), ಏಕ್ತಾನಗರ ಎಕ್ಸ್ಪ್ರೆಸ್ (20919/20920), ಸಾಯಿನಗರ ಶಿರಡಿ (22601/22602, ಅಹ್ಮದಾಬಾದ್ ಎಕ್ಸ್ಪ್ರೆಸ್ (22689/22690) ಮಧುರೈ ಎಕ್ಸ್ಪ್ರೆಸ್ 22101/22102, ತಿರುಪತಿ ಹಮ್‌ಸಫರ್ ಎಕ್ಸಪ್ರೆಸ್ (22705/22706, ಗೋರಖಪುರ ಎಕ್ಸ್ಪ್ರೆಸ್ 22533/22534, ಅಹ್ಮದಾಬಾದ್ ಹಮ್ ಸಫರ್ ಎಕ್ಸ್ಪ್ರೆಸ್ (22191/22920, ಮತ್ತು ಗೋರಖಪುರ ಎಕ್ಸ್ಪ್ರೆಸ್ 12591/12592 ಸೇರಿ ಒಟ್ಟು 13 ರೈಲುಗಳು ವಾರದ ಹಾಗೂ ಕೆಲ...

ಸಾಬಣ್ಣ ಕುರಕುಂದಿ ಅವರಿಗೆ ಗೌಡಾ ಪದವಿ ಪ್ರದಾನ

ಇಮೇಜ್
ಯಾದಗಿರಿ: ಜಿಲ್ಲೆಯ ಯುವ ಮುಖಂಡ ಸಾಬಣ್ಣ ಕುರಕುಂದಿ ಇವರಿಗೆ ಸಾಮಾಜಿಕ ಸೇವೆ ಪರಿಗಣಿಸಿ ಏಶಿಯಾ ಇಂಟರನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.  ಬೆಂಗಳೂರಿನಲ್ಲಿ ಜರುಗಿದ ವಿವಿ ಸಮಾರಂಭದಲ್ಲಿ ಸಾಬಣ್ಣ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ವಿಶೆಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ “ಗೌಡಾ” ನೀಡಲಾಗಿದೆ ಎಂದು ವಿವಿ ಪದವಿ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟಿçÃಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಸಾತ್ವಿಕ ಆಕ್ರೋಶ

ಇಮೇಜ್
"ರಸ್ತೆ ದುರಸ್ತಿ ಮಾಡಿ; ಇಲ್ಲದಿದ್ದರೆ ನಾವೇ ನಾಗರಿಕರಿಂದ ಚಂದಾ ಎತ್ತಿ ದುರಸ್ತಿ ಮಾಡುತ್ತೇವೆ" ಯಾದಗಿರಿ: ಮಳೆಯಿಂದ ಜಿಲ್ಲಾದ್ಯಂತ ಹಾನಿಗೊಳಗಾಗಿರುವ ಪ್ರಮುಖ ರಸ್ತೆಗಳು ಸೇರಿದಂತೆ ವಿಶೇಷವಾಗಿ ನಗರದ ವಿವಿಧೆಡೆ ರಸ್ತೆಗಳು ಹಂಡೆಯAತಹ ಗುಂಡಿಗಳಾಗಿವೆ ಇದರಿಂದ ಜನ ಸುಗಮ ಸಂಚಾರ ನರಕಮಯವಾಗಿದ್ದು ತಕ್ಷಣ ಒಂದು ವಾರದಲ್ಲಿ ದುರಸ್ತಿ ಕೈಗೊಳ್ಳದೇ ಇದ್ದಲ್ಲಿ ಜನರಿಂದ ಚಂದಾ ಸಂಗ್ರಹಿಸಿ ನಾವೇ ರಸ್ತೆ ದುರಸ್ತಿ ಮಾಡಬೇಕಾಗುತ್ತದೆ ಎಂದು ಅಂತಾರಾಷ್ಟಿçÃಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಎಚ್ಚರಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಬಾರಿ ವಾಡಿಕೆಗಿಂತ ಮೊದಲೇ ಮಳೆಗಾಲ ಆರಂಭವಾಗಿದ್ದು, ಮೇ ತಿಂಗಳ ಕೊನೆಯಿಂದ ಮಳೆ ಬರುತ್ತಿದ್ದು, ಮೊದಲೇ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದ್ದ ರಸ್ತೆಗಳು ಸತತ ಮಳೆಗೆ ಇನ್ನಷ್ಟು ಹಂಡೆಯAತಹ ಗುಂಡಿಗಳು ಬಿದ್ದ ಪರಿಣಾಮ ಜನ ಸಂಚಾರ ನರಕ ಸಂಚಾರವಾಗಿ ಪರಿಣಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗಂಜ್ ರಸ್ತೆ, ವಡಗೇರಿ ಕ್ರಾಸ್, ಭೀಮಾನದಿ ಮೇಲಿನ ಸೇತುವೆಯ ಮದ್ಯೆಯು ಗಡಿಗೆ ಗುಂಡಿಗಳು ಬಿದ್ದಿವೆ. ಬಸ್ ನಿಲ್ದಾಣ ರಸ್ತೆ, ಬಾಲಾಜಿ ದೇವಸ್ಥಾನ ರಸ್ತೆ ವಿಶೇಷವಾಗಿ ಶಾಸಕರ ಜನಸಂಪರ್ಕ ಕಚೇರಿ ಎದುರಿಗೆ ಸೇರಿದಂತೆ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿವೆ. ಇಷ್ಟೆಲ್ಲ ಅನಾಹುತ ಆಗಿದ್ದರೂ ಸಹ ಸಂಬAಧಪಟ್ಟ ಇಲಾಖೆ ಕೆಲಸ ಮಾಡದೇ ತೆಪ್ಪಗೆ ಕುಳಿತಿರುವುದು ನಾಗರಿಕ ಸಮಾಜ ಪ್ರಜ್ಞಾವಂತ ಸಮಾಜ...

ಸೆ. 5 ರಂದು 750 ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆ: ಮಲ್ಲಿಕಾರ್ಜುನ ಶಿರಗೋಳ

ಇಮೇಜ್
ಯಾದಗಿರಿ: ದೇಶದಲ್ಲಿ ಸಾವಿರಾರು ವರ್ಷಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದ ಮಣ್ಣಿನ ಗಣೇಶನನ್ನು ಪೂಜಿಸುವ ಮಹತ್ವ, ಉದ್ದೇಶ ಹಾಗೂ ಹಿನ್ನೆಲೆಯನ್ನು ತಿಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಗಣೇಶನ ಉಚಿತವಾಗಿ ವಿತರಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಶಿ ಸೂಪರ್ ಬಜಾರ್ ನ ಮಾಲೀಕರಾದ ಮಲ್ಲಿಕಾರ್ಜುಜ ಶಿರಗೋಳ ಪ್ರಕಟಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರಂಪರಾಗತವಾಗಿ ಮಣ್ಣಿನಿಂದ ಮಾಡಿದ ಗಣೇಶನನ್ನೂ ಪೂಜೆಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ಧರ್ಮ ನೀತಿ ಇದ್ದರೂ ಸಹ ಆಧುನಿಕತೆಯ ಸೋಗು ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ನಮ್ಮ ಹಬ್ಬ ಹರಿದಿನಗಳು ಸಂಪೂರ್ಣ ಧರ್ಮ ಮಾರ್ಗದರ್ಶನದಿಂದ ಹೊರತಾಗಿ ಹಾದಿ ತಪ್ಪಿರುವುದನ್ನು ಮನಗಂಡು ಮತ್ತೆ ಮಣ್ಣಿನ ಗಣೇಶನ ಪೂಜೆ ಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಮಣ್ಣಿನ ಗಣೇಶ ನ ಉಚಿತ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.  ಈ ಕಾರ್ಯವನ್ನು ಮೊದಲಿಗೆ ವಿಜಯ ವಿಠಲ ಸೇವಾ ಸಂಸ್ಥೆಯವರು ಆರಂಭಿಸಿದರು ಇವರೊಂದಿಗೆ ನಮ್ಮ ಶಶಿ ಚಾರಿಟೆಬಲ್ ಮತ್ತು ಶಿಕ್ಷಣ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ, ಪಾರ್ಲಿಮೆಂಟ್ ಗೆಳೆಯರ ಬಳಗ ಹಾಗೂ ಶ್ರೀ ಲಕ್ಷಿö್ಮÃ ದೇವಸ್ಥಾನ ಸಮಿತಿಯವರು ಜೊತೆಗೂಡಿ ಈ ಬಾರಿ ವಿಶೇಷವಾಗಿ ಮಣ್ಣಿನ ಗಣಪ...

ಯಾದಗಿರಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಮೌನೇಶ ಗಿರೆಪ್ಪನೋರ್ ಅವಿರೋಧ ಆಯ್ಕೆ

ಇಮೇಜ್
ಯಾದಗಿರಿ: ಜಿಲ್ಲಾ ಛಾಯಾಗ್ರಾಹಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಛಾಯಾಗ್ರಾಹಕ ಮೌನೇಶ ಗಿರೆಪ್ನೋರ್ ಅವಿರೋಧವಾಗಿ ಆಯ್ಕೆ ಯಾದರು. ನಗರದ ಜಿಲ್ಲಾ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಪದಾಧಿಕಾರಿಗಳಾಗಿ ಶೇಕ್ ಸರ್ದಾರ್ (ಉಪಾಧ್ಯಕ್ಷ), ಈಶ್ವರ ಬಲಕಲ್ (ಕಾರ್ಯದರ್ಶಿ), ಬಾಬು ಮೋಸಸ್ (ಸಹ ಕಾರ್ಯದರ್ಶಿ), ಅಜ್ಹರೋದಿನ್ (ಖಂಜಾಚಿ) ಆಯ್ಕೆಯಾದರು.  ಸಭೆಯಲ್ಲಿ ಸಂಘದ ಹಿರಿಯ ಮುಖಂಡರಾದ ಧರ್ಮಣ್ಣ ಗಿರೆಪ್ನೋರ್, ವಸಿಂ ಅಹಮದ್, ಗಿಡಿಯೋನ್ ಮೋಸೆಸ್, ಅಬ್ದುಲ್ ಅಲಿಂ, ನಂದಕುಮಾರ್, ಉಮಾರ್, ಏಜಾಜ್, ಮುಂತಾದ ಛಾಯಾಗ್ರಹಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಜೆಸ್ಕಾಂ ಇಇ ಕಚೇರಿ ಮುಂದೆ ರೈತರಿಂದ ಭಾರಿ ಪ್ರತಿಭನೆ

ಇಮೇಜ್
ಸರ್ಕಾರ ರೈತರ ಪಂಪ್ ಸೇಟ್ ಗೆ ಆಧಾರ ಕಾರ್ಡ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದೆ: ಯಾದಗಿರಿ: ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ದ ಜಿಲ್ಲಾ ಘಟಕ ವತಿಯಿಂದ ಇಲ್ಲಿನ ಜೆಸ್ಕಾಂ ಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಎಚ್.ಆರ್. ಬಡಿಗೇರ ಅವರ ನೇತೃತ್ವದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಇಇ ಕಚೇರಿ ಮುಂದೆ ಧರಣಿ ನಡೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯ÷್ಕಷ ಎಚ್.ಆರ್. ಬಡಿಗೇರ, ಕೃಷಿ ಪಂಪ್‌ಸೆಟ್‌ಗಳಿಗೆ ಆರ್.ಆರ್. ನಂಬರ್‌ಗೆ ಆಧಾರ ಕಾರ್ಡ ನಂಬರ ಜೋಡಣೆ ಮಾಡುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುವ ನಿಟ್ಟಿನಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ದಿನಾಂಕ: 22-09-2023 ರಿಂದ ಟಿ.ಸಿ. ವಿದ್ಯುತ್ ಕಂಬಗಳು, ವೈರ್‌ಗಳು, ಇತರೆ ಸಾಮಾಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕರಾಳ ಕಾನೂನು ಜಾರಿಗೊಳಿಸಿದೆ.  ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ 2000 ಇಸ್ವಿಯಲ್ಲಿ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ರವರ ಸರ್ಕಾರದ ನೀತಿಗಳ ವಿರುದ್ಧ 2001...

2 ದಿನಗಳ ಜಮಾತೆ ಅಹ್ಮದೀಯಾ ಸಂಘಟನೆಯ ‘ಲಜ್ನಾ ಇಮಾಹಿಯುಲ್ಲಾ’ ಜಿಲ್ಲಾ ಸಮ್ಮೇಳನ ಸಂಪನ್ನ

ಇಮೇಜ್
ಯಾದಗಿರಿ: ಜಮಾತೆ ಅಹ್ಮದೀಯಾ ಸಂಘಟನೆಯ ಲಜ್ನಾ ಇಮಾಹಿಯುಲ್ಲಾಹ್ (ಮಹಿಳಾ ಘಟಕ) ಮತ್ತು ನಾಸಿರಾತುಲ್ ಅಹ್ಮದೀಯಾ (ಕಿಶೋರಿಯರ ಸಂಘ) ದ ಎರಡು ದಿನಗಳ ಯಾದಗಿರಿ- ಕಲ್ಬುರ್ಗಿ ಜಿಲ್ಲಾ ಸಮ್ಮೇಳನ ಶಹಾಪೂರ ಪೇಟ್ ನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಜರುಗಿತು.  ಲಜ್ನಾ ಇಮಾಹಿಯುಲ್ಲಾಹ್ ಜಿಲ್ಲಾದ್ಯಕ್ಷೆ ಶ್ರೀಮತಿ ಮೆಹೆಮೂದಾ ನಯಿಮ್ ಸಗ್ರಿ ಮಾತನಾಡಿ, ನಮ್ಮ ಮಹಿಳಾ ಸಂಘಟನೆ (ಲಜ್ನಾ) ದ್ವಿತಿಯ ಖಲೀಫಾರಾದ ಹಜರತ್ ಮಿರ್ಜಾ ಬಷೀರುದ್ದೀನ್ ಮೆಹೆಮೂದ ಅವರ ಕಾಲದಲ್ಲಿ ಅಂದರೆ 1822 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ವಿಂಗ್ ನ ಉದ್ದೇಶವೇನೆಂದರೆ, ೆ ಮಹಿಳೆಯರು ಹೇಗೆ ಮಕ್ಕಳ ಪಾಲನೆ ಪೋಷಣೆ ಜವಬ್ದಾರಿ ಹಾಗೂ ಹೊಣೆಗಾರಿಕೆಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾ ಬರುತ್ತಿದೆ. ಮಕ್ಕಳು ಬೆಳೆಸುವಾಗ ದೇವರ ಬಗ್ಗೆ ಭಯ ಭಕ್ತಿ ಕಲಿಸಿಕೊಡುವ ಕೆಲಸ ಮಾಡಬೇಕೆಂದು ತಿಳಿಸುತ್ತದೆ. ಮಕ್ಕಳು ಮಾನವೀಯತೆಯನ್ನು ಗುರ್ತಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಮತ್ತು ಮಹಿಳೆಯರು ಟಿವಿ ಇಂಟರನೆಟ್ ನಲ್ಲಿನ ಕೆಟ್ಟ ಅಂಶಗಳಿAದ ದೂರವಿರಬೇಕೆಂದು ಸಲಹೆ ನೀಡಿದರು. ಖಂಡಿತವಾಗಿಯೂ ನೀವು ಮಾಡುವ ಉತ್ತಮ ಕಾರ್ಯಗಳೇ ನಿಮ್ಮ ಮಕ್ಕಳಿಗೆ ಒಳಿತನ್ನು ಮಾಡುತ್ತವೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು. ದೇವರ (ಅಲ್ಲಾನ) ಕಡೆ ಭಕ್ತಿ ಹಾಗೂ ವಿಶ್ವಾಸ ಹೊಂದಿದ್ದರೆ ಖಂಡಿತವಾಗಿ ನಿಮಗೆ ದೇವರ ಒಲುಮೆ ಹಾಗೂ ಕೃಪೆ ಆಗುತ್ತದೆ. ಉತ್ತಮ ಕಾರ್ಯ ಮಾಡಿದರೆ ಉತ್ತಮ ಗುಣವುಳ್ಳ ಸಂತಾನ ಸಿಗುತ್ತದೆ...

ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ;ಅಧಿಸೂಚನೆ ಪ್ರಕಟ

ಇಮೇಜ್
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೌಕರರ ಯಾದಗಿರಿ ವಿಭಾಗೀಯ ಪತ್ತಿನ ಸಹಕಾರ ಸಂಘ ನಿ, ಇದರ ನೂತನ 15 ಜನ ನಿರ್ದೇಶಕರ ಆಯ್ಕೆಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಿಡಿಸಿರುವ ಚುನಾವಣಾಧಿಕಾರಿ ಆರ್. ಪವನಕುಮಾರ್ ಸಹಕಾರ ಸಂಘಕ್ಕೆ ಚುನಾವಣೆಗೆ ಪ್ರಕ್ರಿಯೆ ಆರಂಭಗೊAಡಿದ್ದು, ಕೆಎಸ್‌ಆರ್.ಟಿ.ಸಿ. ಯಾದಗಿರಿ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿರುವ ಕಚೇರಿಯಲ್ಲಿ ದಿ: 07-09-2024 ರಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ದಿ: 13-09- 2024 ನಾಮಪತ್ರ ಸಲ್ಲಿಕೆಗೆ ಕೊನೆಯವಾಗಿದೆ. ದಿನಾಂಕ: 14-09-2024 ರಂದು ನಾಮಪತ್ರ ಪರಿಶೀಲನೆ ಮತ್ತು ದಿನಾಂಕ: 15-09-2024, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯನ್ನು ದಿನಾಂಕ: 17-09-2024 ಮಾಡಲಾಗುತ್ತದೆ ಕೊನೆಗೆ ದಿನಾಂಕ: 22-09-2024.ರಂದು ಅಗತ್ಯವಿದ್ದಲ್ಲಿ ಮತದಾನ ನಡೆಲಸಾಗುವುದು ಮತ್ತು ಅಂದೇ ಫಲಿತಾಂಶ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.