ನಿಲ್ಲದ 13 ಕ್ಕೂ ಹೆಚ್ಚು ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಿ, ರೈಲ್ವೆ ಬೇಡಿಕೆಗಳು ಈಡೇರಿಸಿ: ಟಿಎನ್‌ಭೀ

ಯಾದಗಿರಿ: ಜಿಲ್ಲೆಯಾಗಿ 14 ವರ್ಷಗಳೇ ಕಳೆದರೂ ನಗರದಲ್ಲಿ ಸರಿಸುಮಾರು 13ಕ್ಕೂ ಹೆಚ್ಚು ರೈಲುಗಳ ನಿಲುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ ಕೂಡಲೇ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. 

ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ, ಯಾದಗಿರಿ ಜಿಲ್ಲೆಯಾಗಿ ಸುದೀರ್ಘ ಅವಧಿ ಕಳೆದರೂ ಸಹ ರೈಲ್ವೆ ಇಲಾಖೆ ಇನ್ನು ಇತ್ತ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈಲ್ವೆ ನೂತನ ಸಚಿವ ವಿ. ಸೋಮಣ್ಣನವರು ಈ ಭಾಗದ ದೀರ್ಘ ಕಾಲದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. 

ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್(22691/22692), ಪದ್ಮಾವತಿ ಎಕ್ಸ್ಪ್ರೆಸ್ (12731/12732), ರಾಜಕೋಟ್ ಎಕ್ಸ್ಪ್ರೆಸ್ (16613/16641), ದ್ವಾರಕಾ ಎಕ್ಸ್ಪ್ರೆಸ್ (19567/19568), ವಾಸ್ಕೋ ಎಕ್ಸ್ಪ್ರೆಸ್ (17321/17322), ಏಕ್ತಾನಗರ ಎಕ್ಸ್ಪ್ರೆಸ್ (20919/20920), ಸಾಯಿನಗರ ಶಿರಡಿ (22601/22602, ಅಹ್ಮದಾಬಾದ್ ಎಕ್ಸ್ಪ್ರೆಸ್ (22689/22690) ಮಧುರೈ ಎಕ್ಸ್ಪ್ರೆಸ್ 22101/22102, ತಿರುಪತಿ ಹಮ್‌ಸಫರ್ ಎಕ್ಸಪ್ರೆಸ್ (22705/22706, ಗೋರಖಪುರ ಎಕ್ಸ್ಪ್ರೆಸ್ 22533/22534, ಅಹ್ಮದಾಬಾದ್ ಹಮ್ ಸಫರ್ ಎಕ್ಸ್ಪ್ರೆಸ್ (22191/22920, ಮತ್ತು ಗೋರಖಪುರ ಎಕ್ಸ್ಪ್ರೆಸ್ 12591/12592 ಸೇರಿ ಒಟ್ಟು 13 ರೈಲುಗಳು ವಾರದ ಹಾಗೂ ಕೆಲವು ನಿತ್ಯ ಸಂಚರಿಸುವ ರೈಲುಗಳಾಗಿದ್ದು ಇವುಗಳು ನಿಲುಗಡೆಯಾಗದೇ ಇರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದೆ.

ಇನ್ನು ಕೋವಿಡ್ ನಂತರ ಬಂದ್ ಮಾಡಿರುವ ಸೊಲ್ಲಾಪುರ ರಾಯಚೂರು ಇಂಟರಸಿಟಿ ರೈಲು ಪುನಾರಂಭಿಸಬೇಕು. ಮತ್ತು ಬಹುದಿನಗಳ ಬೇಡಿಕೆಯಾದ ಕಲ್ಬುರ್ಗಿ ಬೆಂಗಳೂರು ಮದ್ಯೆ ಫಾಸ್ಟ್ ಪ್ಯಾಸಿಂಜರ್ ರೈಲು ಆರಂಭಿಸಬೇಕು. ದಿನವೊಂದಕ್ಕೆ 5-6 ಲಕ್ಷ ರೂ. ಲಾಭ ತರುತ್ತಿರುವ ಗುಂತಕಲ್ ವಿಭಾಗದಲ್ಲಿಯೇ ಎರಡನೇ ಅತಿದೊಡ್ಡ ಆದಾಯ ತಂದುಕೊಡುತ್ತಿರುವ ಯಾದಗಿರಿ ರೈಲು ನಿಲ್ದಾಣವನ್ನು ಸಿ ದರ್ಜೆಯಿಂದ ಬಿ ದರ್ಜೆಗೆ ಏರಿಸಬೇಕು.

ನನೆಗುದಿಗೆ ಬಿದ್ದಿರುವ ಕಲ್ಬುರ್ಗಿಯಲ್ಲಿ ರೈಲ್ವೆ ವಿಭಾಗವನ್ನು ಶೀಘ್ರ ಆರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಕಡೇಚೂರು ಕೋಚ್ ಫ್ಯಾಕ್ಟರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಸುರೇಶ ಬೆಳಗುಂದಿ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕುಲೂರು, ಮರೆಪ್ಪ ಕಡ್ಡಿ, ಕಾಶಿನಾಥ ನಾನೇಕ, ರಮೇಶ ನಾಯಕ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು