ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮದ್ದರಕಿಶ್ರೀ ಗೂಳಿ ಬಸವೇಶ್ವರ ಜಾತ್ರೆ ನಾಳೆ

ಇಮೇಜ್
  ಮಹಾಂತ ಗೌಡ  ಮದ್ದರಕಿಶ್ರೀ ಗೂಳಿ ಬಸವೇಶ್ವರ ಜಾತ್ರೆ ನಾಳೆ ಯಾದಗಿರಿ ಟೈಮ್ಸ್ ವಾರ್ತೆ 16.04.25 ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಆರಾದ್ಯ ದೈವ ಶ್ರೀ ಗೂಳಿ ಬಸವೇಶ್ವರ ಜಾತ್ರಾ ಮಹೋತ್ಸವ ಇದೇ ತಿಂಗಳು ೧೮ ರಂದು ಸಂಜೆ ೬.೩೦ಕ್ಕೆ ವಿಜೃಂಭಣೆಯಿAದ ಜರುಗಲಿದೆ. ಶನಿವಾರ ದಿ. ೧೯ ರಂದು ಅಗ್ಗಿ ತುಳಿಯುವ ಕಾರ್ಯಕ್ರಮನಡೆಯಲಿದೆ. ನೇತೃತ್ವವನ್ನು ಮದ್ದರಕಿಯ ಗಚ್ಚಿನಮಠದ ಶ್ರೀ ಷ.ಬ್ರ. ಪರಮಪೂಜ್ಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮದ್ದರಕಿಯ ಹಿರೇಮಠದ ಷ.ಬ್ರ. ಶ್ರೀ ಶೀಲವಂತ ಶಿವಾಚಾರ್ಯರು ವಹಿಸಲಿದ್ದಾರೆ. ದೇವರ ಜಾತ್ರಾ ಮಹೋತ್ಸವದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗ್ರಾಮದ ಮುಖಂಡ ಮಹಾಂತಗೌಡ ಮದ್ದರಕಿ ಮನವಿ ಮಾಡಿಕೊಂಡಿದ್ದಾರೆ.

ತೆರಿಗೆ ಪಾವತಿಸಿ ವಿನಾಯತಿ ಪಡೆಯಿರಿ: ಲಲಿತಾ

ಇಮೇಜ್
 ಏ.30ರೊಳಗಾಗಿ ತೆರಿಗೆ ಕಟ್ಟಿ, ಶೇ5 ರಷ್ಟು ರಿಯಾಯಿತಿ ಪಡೆಯರಿ: ಅಧ್ಯಕ್ಷೆ ಲಲಿತಾ ಅನಪುರ ಯಾದಗಿರಿ: ಬರುವ ಏ.30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ನಗರದ ಆಸ್ತಿಗಳ ಮಾಲಿಕರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದೆಂದು  ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ್ ಹೇಳಿದರು. ನಗರಸಭೆ ಆವರಣದಲ್ಲಿ ಈ ಕುರಿತು ಮಂಗಳವಾರ ಅಭಿಮಾಯನಕ್ಕೆ ಅಧ್ಯಕ್ಷರು,ಪೌರಾಯುಕ್ತರು, ಸದಸ್ಯರು ಮುನ್ನಡಿ ಬರೆದರು. ನಗರದ ಅಭಿವೃದ್ಧಿಗೆ ಸಾರ್ವಜನಿಕರು ಕೈಜೊಡಿಸಬೇಕು, ಅಂದಾಗಲೇ ಎಲ್ಲವೂ ಸಾಧ್ಯವೆಂದು ಅಧ್ಯಕ್ಷರು ಹೇಳಿದರು.  ಈಗಾಗಲೇ ವಿವಿಧ ರೀತಿಯಿಂದ ಜನರಲ್ಲಿ ಮನವರಿಕೆ ಮಾಡಲಾಗಿದ್ದು, ಕೂಡಲೇ ತೆರಿಗೆ ಕಟ್ಟುವತ್ತ ಜನರು ಮನಸ್ಸು ಮಾಡಬೇಕೆಂದರು. ನಗರಸಭೆ ಆಯುಕ್ತ ರಾದ ಉಮೇಶ ಚವ್ಹಾಣ ಮಾತನಾಡಿ, ನಗರದ ಅಭಿವೃದ್ಧಿಗೆ ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದೆವೆ. ಈಗ ಜನರು ತೆರಿಗೆ ಕಟ್ಟಿದರೇ ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುನಾಥ ದಾಸನಕೇರಿ, ಕಛೇರಿ ವ್ಯವಸ್ಥಾಕರಾದ ಅಶ್ವನಿ ಚವ್ಹಾಣ, ಕಂದಾಯ ಅಧಿಕಾರಿ‌ ಜಗದೇವಿ, ಕಂದಾಯ ನಿರಿಕ್ಷಕರಾದ ಮಾನಪ್ಪ, ಕರ ವಸುಲಿಗಾರರಾದ ನರಸಪ್ಪ, ಬೋಜಲಿಂಗ್, ಕಂಪ್ಯೂಟರ್ ಅಪರೇಟರ್‌ ಅಶೋಕ‌ ಯಾದವ್ ಸೇರಿದಂತೆ ಕಛೇರಿ ‌ಸಿಬ್ಬಂದಿಗಳು ಇದ್ದರು.

Highlights 15-04-2025

ಇಮೇಜ್