ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ನವ ವಿವಾಹಿತರಿಗೆ ಸಮಸ್ಯೆ:  ವಕ್ಫ್  ಮಂಡಳಿ ಕಾರ್ಯವೈಖರಿಗೆ ಮುಸ್ಲಿಂ  ಸ ಮಾಜಿಕರಿಂದಲೇ ಆಕ್ರೋಶ ಯಾದಗಿರಿ ಟೈಮ್ಸ್ ವಿಶೇಷ | 14.11.24 (ವೈಜನಾಥ ಹಿರೇಮಠ) ಯಾದಗಿರಿ: ವಕ್ಫ್ ಕಮೀಟಿ ವಿವಾದ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದರ ಮದ್ಯೆಯೇ ಮುಸ್ಲಿಂ ಸಮುದಾಯದವರ ವಿವಾಹ ಕಾರ್ಯಕ್ಕೂ ಪ್ರಮಾಣ ಪತ್ರ ನೀಡಬೇಕಾದ ವಕ್ಫ್ ಕಮೀಟಿ ತನ್ನ ಕೆಲಸ ಸರಿಯಾಗಿ ಮಾಡದೇ ಮಾಡಬಾರದ ಕೆಲಸದಲ್ಲಿ ನಿರತವಾಗಿದೆ ಎಂಬ ಸಂಗತಿ ಈದೀಗ ಬೆಳಕಿಗೆ ಬಂದಿದೆ. ಹೌದು, ರಾಜ್ಯಾದ್ಯಂತ ವಕ್ಫ್ ಕಮೀಟಿಯಿಂದ ಕಂಡ ಕಂಡ ಜಮೀನು ತನ್ನದೆಂದು ಹೇಳಿಕೊಂಡು ಆಪೋಷನ ಮಾಡುತ್ತಿರುವ ವಕ್ಫ್ ಗೆ ತನ್ನ ಕೆಲಸವನ್ನು ಸಹ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ಸ್ವತಃ ಮುಸ್ಲಿಂ ಸಮುದಾಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಮದುವೆಯಾಗುವ ಮುಸ್ಲಿಂ ಸಮುದಾಯದವರು ಒಂದೊ ವಕ್ಫ್ ನಿಂದ ನಿಯುಕ್ತಿಗೊಂಡ ಖಾಜಿಗಳಿಂದ ಮದುವೆ ಪ್ರಮಾಣ ಪತ್ರ ಪಡೆಯಬೇಕು ಇಲ್ಲವೇ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ವಿವಾಹ ಪ್ರಮಾಣಪತ್ರ ಪಡೆಯಬೇಕು. ಇವುಗಳ ಪೈಕಿ ವಕ್ಫ್ ನಿಂದ ಪಡೆಯುವ ಪ್ರಮಾಣ ಪತ್ರ ವಿಶೇಷವಾಗಿ ವಿದೇಶಕ್ಕೆ ಉದ್ಯೋಗಾಕಾಂಕ್ಷಿಗಳಾಗಿ ತೆರಳುವವರಿಗೆ ಪ್ರಮುಖ ಮಾನದಂಡವಾಗಿದೆ. ಆದರೆ ಈದೀಗ ಸರ್ಕಾರದಿಂದ ನೇಮಕಗೊಂಡ ಖಾಜಿಗಳು ನಿವೃತ್ತಿಹೊಂದಿದ್ದಾರೆ ಅಳಿದುಳಿದವರು ಹೊರಹೋಗುವ ಹಂತದಲ್ಲಿದ್ದು, ಬಹುತೇಕೆಡೆಗಳಲ್ಲಿ ಖಾಜಿಗಳೇ ಇಲ್ಲ. ಹೀಗಾಗಿ ಸಮುದಾಯದವರಿಗೆ ಅನುಕೂಲವಾಗಲಿ ಎಂಬ ಕಾರಣಕ...
 ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯಿಂದ ನ. 14      ರಂದು ಯರಗೋಳದಲ್ಲಿ ಭವ್ಯ ರಾಜ್ಯೋತ್ಸವ ಸಮಾರಂಭ ಯಾದಗಿರಿ ಟೈಮ್ಸ್ ವಾರ್ತೆ 13.11.24 ಯಾದಗಿರಿ: ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯರಗೋಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯರಗೋಳ ಕನ್ನಡಿಗರ ವೈಭವ ಸಮಾರಂಭ ತಾಲ್ಲೂಕಿನ ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇದೇ ನವೆಂಬರ್ 14 ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ತಾಪೂರದ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಪರಮಪೂಜ್ಯ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ವಹಿಸಲಿದ್ದಾರೆ. ಸಮ್ಮುಖವನ್ನು ಬೆಂಗಳೂರಿನ ಶ್ರೀಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷರಾದ ಬ್ರಹ್ಮಚಾರಿ ಆತ್ಮಾನಿರತಾಮೃತ ಚೈತನ್ಯ, ಯರಗೋಳ ಗವಿಸಿದ್ದಲಿಂಗೇಶ್ವರ ವಿರಕ್ತಮಠದ ಶ್ರೀ ಪರಮಪೂಜ್ಯ ಸಂಗಮೇಶ್ವರ ದೇವರು ಆಗಮಿಸುವರು. ಅಧ್ಯಕ್ಷತೆಯನ್ನು ಸೇವಾ ಸಮಿತಿ ಅದ್ಯಕ್ಷರಾದ ಶಿವರಾಜ ಮಾನೇಗಾರ ವಹಿಸುವರು, ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಉತ್ತರಾದೇವಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಗುರುಮಕಲ್ ಶಾಸಕ ಶರಣಗೌಡ ಕಂದಕೂರು, ಕೆಪಿಸಿಸಿ ಸದಸ್ಯ ಶರಣಪ್ಪ ಡಿ. ಮಾನೇಗಾರ, ಇಬ್ರಾಹಿಂಪುರದ ಶ್ರೀಸಾಯಿ ಮಂದಿರದ ಅಧ್ಯಕ್ಷ ಮಹಾರಾಜ ದಿಗ್ಗಿ, ಗ್ರಾಪಂ ಅದ್ಯಕ್ಷ ರಾಮಲಿಂಗಪ್ಪ ಅಲ್ಲಿಪೂರ, ಗ್ಯಾರೆಂಟಿ...
ಇಮೇಜ್
 ಶೇಂಗಾ ಬೆಳೆಯ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ, ಲಾಭ ಪಡೆಯಲು ಸಾಧ್ಯ: ರವೀಂದ್ರ ಬೈಟಿಪುಲಿ ಯಾದಗಿರಿ: ಶೇಂಗಾ ಬೆಳೆಯ ಆಧುನಿಕ ತಾಂತ್ರಿಕತೆಗಳು ಆಳವಡಿಸಿಕೊಂಡು ಹೆಚ್ಚಿನ ಇಳುವರಿ ಮತ್ತು ಲಾಭ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರವೀಂದ್ರ ಬೈಟಿಪುಲಿ ತಿಳಿಸಿದರು.  ಕಲಿಕೆ ಟಾಟಾ ಟ್ರಸ್ಟ್ಸ್, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಯಾದಗಿರಿ ಇವರ ಸಹಯೋಗದಲ್ಲಿ ತಾಲ್ಲೂಕಿನ ಕ್ಯಾಸಪನಳ್ಳಿ ಗ್ರಾಮದ ರಾಜು ತಂದೆ ಹಣಮಂತ ಇವರ ಕ್ಷೇತ್ರ (ಹೊಲ)ದಲ್ಲಿ ಆಯೋಜಿಸಿದ್ದ ಶೇಂಗಾ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  ಶೇಂಗಾ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಬೀಜ ತಳಿಗಳ ಆಯ್ಕೆ, ಬೀಜೋಪಚಾರ, ಬೀಜದ ಪ್ರಮಾಣ, ಬಿತ್ತುವ ಸಮಯ, ಅಂತರ, ಕಳೆ ಮತ್ತು ನೀರು ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ರಸ ಗೊಬ್ಬರಗಳ ಆಯ್ಕೆ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು.  ಯಾದಗಿರಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಡಾ.ರಾಜಕುಮಾರ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳಿಂದ ಆರ್ಥಿಕವಾಗಿ ಕೃಷಿಯನ್ನು ಲಾಭದಾಯಕ ವಾಗಿಸಿಕೊಳ್ಳಬೇಕು ಅದರಲ್ಲೂ ಕಲ್ಲಂಗಡಿ ಹಣ್ಣಿನ ಬೆಳೆ ಬೆಳೆದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆ ಕುರಿ...
ಇಮೇಜ್
 ಒನಕೆ ಓಬವ್ವ ಜಯಂತಿ: ವಿಧ್ಯಾರ್ಥಿಗಳಿಗೆ ಶಬ್ದಕೋಶ, ನೋಟ್ ಪುಸ್ತಕ ವಿತರಣೆ ಕಲ್ಬುರ್ಗಿ: ಒನಕೆ ಓಬವ್ವ ಜಯಂತಿ ಅಂಗವಾಗಿ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿಕಲಚೇತನ ನಿವೃತ್ತ ಪೊಲೀಸ್ ಖಾಜಾ ಫರಿದುದ್ದೀನ್ ದೇಣಿಗೆ ನೀಡಿದರು. ವೀರವನಿತೆ ಒನಕೆ ಓಬವ್ವ ಜಯಂತಿಯAದು ಬೀದರ ಜಿಲ್ಲೆಯ ಹಳ್ಳಿಖೇಡ ಕೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಅವರು ವಿದ್ಯಾರ್ಥಿಗಳಿಗೆ ಶಬ್ದಕೋಶಗಳ ಪುಸ್ತಕ ಹಾಗೂ ನೋಟಬುಕ್ ಉಚಿತವಾಗಿ ವಿತರಿಸಿದರು. ಈ ಹಿಂದೆ ಅವರು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ತಮ್ಮ ನಿವೃತ್ತಿ ವೇತನದ ಅರ್ದದಷ್ಟು ಹಣವನ್ನು ಕಡುಬಡ ಸರ್ಕಾರಿ ಶಾಲಾ ಮ ಕ್ಕಳಿಗೆ ನಿರಂತರವಾಗಿ ವಿತರಿಸುತ್ತಾ ಬರುತ್ತಿದ್ದಾರೆ.
ಇಮೇಜ್
 ರೈತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಕುಂಬಾರ ನೇಮಕ ಯಾದಗಿರಿ: ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಕುಂಬಾರ ಇವರನ್ನು ನೇಮಕ ಮಾಡಲಾಗಿದೆ.  ಈ ಕುರಿತು ನೇಮಕ ಆದೇಶವನ್ನು ಹಸ್ತಾಂತರಿಸಿದ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ರಾಜ್ಯಾಧ್ಯಕ್ಷ ಶಾಂತಗೌಡ ಆದೇಶದ ಮೇರೆಗೆ ರಾಜ್ಯ ಉಪಾಧ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಇವರ ಶಿಫಾರಸಿನ ಮೇರೆಗೆ ನೇಮಕ ಮಾಡಲಾಗಿದೆ.  ಕೂಡಲೇ ಜವಬ್ದಾರಿ ವಹಿಸಿಕೊಂಡು ಸಂಘಟನೆ ಬಲಪಡಿಸಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿ ಆದೇಶ ನೀಡಿದರು.  ಈ ಸಂದರ್ಭದಲ್ಲಿ ರೈತ ಸೇನೆ ಮುಖಂಡರು ಇದ್ದರು.
ಇಮೇಜ್
ತಿಳಿದು ಭಕ್ತಿಯ ಮಾಡಬೇಕು ಎಂದು ಪವಾಡಗಳ ಮೂಲಕ ಜಾಗೃತಿ ಮೂಡಿಸಿದ್ದರು ವಿಶ್ವಾರಾಧ್ಯರು: ಪಂ. ಬಸವರಾಜ ಶಾಸ್ತಿç ಎಲೆಕೂಡ್ಲಿಗಿ ಯಾದಗಿರಿ ಟೈಮ್ಸ್ ವಾರ್ತೆ |  13.11.24 ಯಾದಗಿರಿ: ಅಸಮಂಜಸ ಆ ಚಾರ ಬೇಡ, ದೇವರ ಮುಂದೆ ಸಕ್ಕರೆ, ತುಪ್ಪ, ಹಾಲು ಹಾಕಿ ಗಲಿಜು ಮಾಡಬೇಡಿ ತಿಳಿದು ಆಚರಣೆ ಮಾಡಬೇಕು ವಿಚಾರವಿಲ್ಲದ ಆಚಾರ ಸರಿಯಲ್ಲ ಎಂಬ ವಿಚಾರಗಳನ್ನು ವಿಶ್ವಾರಾಧ್ಯರು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ತಮ್ಮ ಪವಾಡಗಳ ಮೂಲಕ ಮಾಡಿದರು ಎಂದು ಪ್ರವಚನಕಾರ ವೇ||ಮೂ|| ಬಸವರಾಜ ಶಾಸ್ತಿç ಎಲೆಕೂಡ್ಲಿಗಿ, ಶಹಾಪೂರ ಹೇಳಿದರು. ಇಲ್ಲಿನ ಲಕ್ಷಿö್ಮÃನಗರದ ಶ್ರೀ ಲಕ್ಷಿö್ಮÃ ಮಾರುತಿ ದೇವಸ್ಥಾನ ಆವರಣದಲ್ಲಿ ಗೌರಿಹುಣ್ಣಿಮೆ ಅಂಗವಾಗಿ ನಡೆಯುತ್ತಿರುವ ಶ್ರೀವಿಶ್ವಾರಾಧ್ಯ ಪುರಾಣ ಪ್ರವಚನ ಕಾರ್ಯ ನೆಡೆಸಿಕೊಟ್ಟು ಮಾತನಾಡಿದ ಅವರು, ಘನಪಂಡಿತ ವಿಶ್ವಾರಾಧ್ಯರು ಅಣಿಮಾದಿ ಅಷ್ಟ ಸಿದ್ದಿಗಳನ್ನು ಪಡೆದ ಮಹಾತ್ಮರಾಗಿದ್ದರು. ಅಣಿಮಾದಿ ಅಷ್ಟಸಿದ್ದಿಗಳನ್ನು ತ್ರೇತಾಯುಗದಲ್ಲಿದ್ದ ಆಂಜನೇಯ ಸ್ವಾಮಿ ಹೊಂದಿದ್ದAತಹ ವಿಶೇಷ ಜ್ಞಾನವನ್ನು ವಿಶ್ವಾರಾಧ್ಯರು ಹೊಂದಿದ್ದರು ಎಂದು ನುಡಿದರು.  ವಿಶ್ವಾರಾಧ್ಯರು ತಮ್ಮ ಜೀವಿತಾವಧಿಯುದ್ದಕ್ಕೂ ಅನೇಕ ಲೀಲೆಗಳು, ಪವಾಡಗಳಿಂದ ಜನರನ್ನು ಉದ್ಧರಿಸಿ ಅವರ ಬೇಕು ಬೇಡ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ ನಡೆದಾಡಿದ ದೇವರಾಗಿ ಅಪಾರ ಲೀಲೆ ತೋರಿದರು ಎಂದು ವಿವರಿಸಿದರು.  ಉಣ್ಣದ ಲಿಂಗಕ್ಕೆ ಬೊನವ ಹಿಡಿಯಬೇಡಿ ಉಣ್ಣುವ...