ನವ ವಿವಾಹಿತರಿಗೆ ಸಮಸ್ಯೆ: 

ವಕ್ಫ್ ಮಂಡಳಿ ಕಾರ್ಯವೈಖರಿಗೆ ಮುಸ್ಲಿಂ ಮಾಜಿಕರಿಂದಲೇ ಆಕ್ರೋಶ

ಯಾದಗಿರಿ ಟೈಮ್ಸ್ ವಿಶೇಷ | 14.11.24

(ವೈಜನಾಥ ಹಿರೇಮಠ)

ಯಾದಗಿರಿ: ವಕ್ಫ್ ಕಮೀಟಿ ವಿವಾದ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದರ ಮದ್ಯೆಯೇ ಮುಸ್ಲಿಂ ಸಮುದಾಯದವರ ವಿವಾಹ ಕಾರ್ಯಕ್ಕೂ ಪ್ರಮಾಣ ಪತ್ರ ನೀಡಬೇಕಾದ ವಕ್ಫ್ ಕಮೀಟಿ ತನ್ನ ಕೆಲಸ ಸರಿಯಾಗಿ ಮಾಡದೇ ಮಾಡಬಾರದ ಕೆಲಸದಲ್ಲಿ ನಿರತವಾಗಿದೆ ಎಂಬ ಸಂಗತಿ ಈದೀಗ ಬೆಳಕಿಗೆ ಬಂದಿದೆ.

ಹೌದು, ರಾಜ್ಯಾದ್ಯಂತ ವಕ್ಫ್ ಕಮೀಟಿಯಿಂದ ಕಂಡ ಕಂಡ ಜಮೀನು ತನ್ನದೆಂದು ಹೇಳಿಕೊಂಡು ಆಪೋಷನ ಮಾಡುತ್ತಿರುವ ವಕ್ಫ್ ಗೆ ತನ್ನ ಕೆಲಸವನ್ನು ಸಹ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ಸ್ವತಃ ಮುಸ್ಲಿಂ ಸಮುದಾಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಮದುವೆಯಾಗುವ ಮುಸ್ಲಿಂ ಸಮುದಾಯದವರು ಒಂದೊ ವಕ್ಫ್ ನಿಂದ ನಿಯುಕ್ತಿಗೊಂಡ ಖಾಜಿಗಳಿಂದ ಮದುವೆ ಪ್ರಮಾಣ ಪತ್ರ ಪಡೆಯಬೇಕು ಇಲ್ಲವೇ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ವಿವಾಹ ಪ್ರಮಾಣಪತ್ರ ಪಡೆಯಬೇಕು. ಇವುಗಳ ಪೈಕಿ ವಕ್ಫ್ ನಿಂದ ಪಡೆಯುವ ಪ್ರಮಾಣ ಪತ್ರ ವಿಶೇಷವಾಗಿ ವಿದೇಶಕ್ಕೆ ಉದ್ಯೋಗಾಕಾಂಕ್ಷಿಗಳಾಗಿ ತೆರಳುವವರಿಗೆ ಪ್ರಮುಖ ಮಾನದಂಡವಾಗಿದೆ. ಆದರೆ ಈದೀಗ ಸರ್ಕಾರದಿಂದ ನೇಮಕಗೊಂಡ ಖಾಜಿಗಳು ನಿವೃತ್ತಿಹೊಂದಿದ್ದಾರೆ ಅಳಿದುಳಿದವರು ಹೊರಹೋಗುವ ಹಂತದಲ್ಲಿದ್ದು, ಬಹುತೇಕೆಡೆಗಳಲ್ಲಿ ಖಾಜಿಗಳೇ ಇಲ್ಲ. ಹೀಗಾಗಿ ಸಮುದಾಯದವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸರ್ಕಾರ ಮತ್ತೆ ಹಲವು ಸುತ್ತೋಲೆಗಳು ಹೊರಡಿಸಿದೆ ಎಂದು ಮುಖಂಡರು ಹೇಳುತ್ತಿದ್ದಾರೆ ಆದರೆ ಅದರ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಹೇಳುತ್ತಿದ್ದಾರೆ. 

ಖಾಜಿಗಳ ನೇಮಕ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರೆ ಅದು ಮೈನಾರಿಟಿ ಡಿಪಾರ್ಟಮೆಂಟ್ ವ್ಯಾಪ್ತಿಗೆ ಬರುತ್ತದೆ ಎಂಬು ಸಿದ್ದ ಉತ್ತರ ಅಧಿಕಾರಿಗಳಿಂದ ಬರುತ್ತದೆ. ಇತ್ತ ವಕ್ಫ್ ಕೆಲಸವೇನು ಎಂದರೆ ಅದೂ ಸಹ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ.

ಅತ್ತ ಸರ್ಕಾರ ಖಾಜಿಗಳ ನೇಮಕ ಮಾಡುವ ಕಾರ್ಯ ಸ್ಥಗಿತಗೊಳಿಸಿದೆ ಎಂದು ಇನ್ನೊಂದು ಸುತ್ತೊಲೆ ಪ್ರಕಾರ ತಿಳಿಸಲಾಗಿದೆ ಆದರೆ ಮುಸ್ಲಿಮರು ವಿದೇಶಕ್ಕೆ ತೆರಳಬೇಕಾದರೆ ಮದುವೆ ಪ್ರಮಾಣ ಪತ್ರ ವನ್ನು ವಕ್ಫ್ ನಿಂದಲೇ ಪಡೆದಿರಬೇಕೆಂಬ ನಿಯಮದಿಂದಾಗಿ ಹಲವರ ವಿದೇಶಕ್ಕೆ ಕೆಲಸಕ್ಕೆ ತೆರಳಬೇಕಾದವರಿಗೆ ವಕ್ಫ್ ವಿವಾಹ ಪ್ರಮಾಣಪತ್ರ ಇಲ್ಲದೇ ಇರುವುದರಿಂದ ಹೊರದೇಶಕ್ಕೆ ಹಾರಲು ಅಡ್ಡಿಯಾಗಿದೆ.

ಸರ್ಕಾರ (ವಕ್ಫ್ ಇಲಾಖೆ) ಈಗಾಗಲೇ ಮತ್ತೊಂದು ಸುತ್ತೋಲೆ ಹೊರಿಡಿಸಿದ್ದು ಅದರನ್ವಯ ವಕ್ಫ್ ನಲ್ಲಿ ನೋಂದಣಿಯಾಗಿರುವ ಮಸೀದಿಯ ಮುಲ್ಲಾ ಮೌಲಾನಾಗಳು ಸಹ ವಿವಾಹ ಮಾಡಿಸಬಹುದು ಎಂದು ಹೇಳಲಾಗುತ್ತಿದ್ದರೂ ಯಾದಗಿರಿ ಜಿಲ್ಲೆಯಲ್ಲಿ ವಕ್ಫ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ ಎಂದು ಶಹಾಪೂರದ ಸಮಾಜದ ಮುಖಂಡ ಅವದ್ ಚಾವೂಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಕೆಲಸಗಳನ್ನು ಮಾಡಬೇಕಾದ ವಕ್ಫ್ ಕಮೀಟಿ ಇದಾವುದನ್ನು ಮಾಡದೇ ಇರುವುದರಿಂದ ಸಮಾಜದ ಜನತೆಗೆ ತೊಂದರೆಯಾಗುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಶಾಸಕರು, ಸಚಿವರ ಪತ್ರಗಳಿಗೂ ವಕ್ಫ್ ಮಂಡಳಿಯವರು ಬೆಲೆ ಕೊಡದೇ ತಮಗೆ ಮನಸ್ಸಿಗೆ ತೋಚಿದಂತೆ ವಕ್ಫ್ ನ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಜನಪ್ರತಿನಿಧಿಗಳಿಗೂ ಬೆಲೆ ಕೊಡದಂತೆ ವಕ್ಫ್ ಕಮೀಟಿ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸುತ್ತಾರೆ. 

ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕಾದ ವಕ್ಫ್ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಅಲ್ಲ ಸಲ್ಲದ ಕಂಡ ಕಂಡ ಜಮೀನು ತನ್ನದೆಂದು ಹೇಳುವ ಕೆಲಸಕ್ಕೆ ಕೈಹಾಕಿದ ಪರಿಣಾಮ ರಾಜ್ಯಾದ್ಯಂತ ಸುದ್ದಿಯಲ್ಲಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಒಟ್ಟಾರೆ ವಕ್ಫ್ ಎಂಬುದು ರೈತರಿಗೆ, ಆಸ್ತಿವಂತರಿಗೆ, ಸರ್ಕಾರಿ ಇಮಾರತುಗಳಿಗೆ, ಕಟ್ಟಡಗಳಿಗೆ ಅಲ್ಲದೇ ಈದೀಗ ಮುಸ್ಲಿಮರಿಗೂ ಮಾರಕವಾಗಿರುವಂತೆ ವರ್ತಿಸುತ್ತಿರುವುದು ಇದರ ಬಗ್ಗೆ ಎಲ್ಲರೂ ಯೋಚಿಸುವಂತೆ ಮಾಡಿದ್ದು ಸುಳ್ಳಲ್ಲ. ಒಟ್ಟಾರೆ ಸರ್ಕಾರ ವಕ್ಫ್ ಎಂಬ ನಿಯಂತ್ರಣ ತಪ್ಪಿದ ಲಗಾಮಿಲ್ಲದ ಕುದುರೆಗೆ ಮೂಗು ದಾರ ಹಾಕಬೇಕಾದ ಕಾಲ ಹತ್ತಿರವಂತೂ ಬಂದಿದೆ.

ಸಮಸ್ಯೆ ಉಲ್ಬಣಿಸಿದ್ದು ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಏ$ನು ಕೆಲಸ ಮಾಡುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು