ಅ.1ರಂದು ಯಾದಗಿರಿಯಲ್ಲಿ ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ 

---- 

ಯಾದಗಿರಿ: ಕಳೆದ ಆ.13 ರಂದು ನಗರದಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ನಡೆದ ಪ್ರತಿಭಟನೆ ವೇಳೆ ಕೋಲಿ ಸಮಾಜದ ಗುರುಗಳನ್ನು ಮತ್ತು ಸಮಾಜದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂಬ ಬೇಡಿಕೆ ಸೇರಿದಂತೆಯೇ ಮೂರು ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಅ.1 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕರ‍್ಜನ ಗೋಸಿ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ‍್ಕಾರದ ಆದೇಶದಂತೆಯೇ ತಳವಾರ ಸಮುದಾಯದವರಿಗೆ  ಎಸ್ ಟಿ ಜಾತಿ ಪ್ರಮಾಣಪತ್ರ ( ರ‍್ಟೀಫಿಕೆಟ್) ನೀಡಬೇಕು ಮತ್ತು ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕೆಂದು ಅಂದು ಹೋರಾಟ ನಡೆಯಲಿದೆ. ಅಂದಿನ ಹೋರಾಟಕ್ಕೆ ಜಿಲ್ಲೆ ಸೇರಿದಂತೆಯೇ ವಿವಿಧಡೆಯಿಂದ ಸುಮಾರು 15 ಸಾವಿರ ಜನರು ಭಾಗವಹಿಸಿ ಸಮಾಜದ ಶಕ್ತಿ ಪ್ರರ‍್ಶಿಸಿ ರ‍್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು. ಕೋಲಿ ಸಮಾಜದ ನಾವ್ಯಾರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿಲ್ಲ. ರ‍್ಕಾರದ ಆದೇಶದಂತೆಯೇ ತಳವಾರರು ಇದನ್ನು ಪಡೆಯುತ್ತಿದ್ದು, ಇದು ಹೇಗೆ ನಕಲಿ ಆಗುತ್ತದೆ ಎಂದು ಗೋಸಿ ಪ್ರಶ್ನಿಸಿದರು.

ಸಮಾಜದ ಜನರು ಪ್ರಜ್ಞಾವಂತರಾಗಿದ್ದಾರೆ. ಇದನ್ನು ನಮ್ಮನ್ನು ಟೀಕಿಸುವ, ಅವಹೇಳನಕಾರಿ ಮಾತುಗಳನ್ನು ಆಡುವ ವಾಲ್ಮೀಕಿ ಸಮುದಾಯದ ಕೆಲವರು ರ‍್ಥ ಮಾಡಿಕೊಳ್ಳಬೇಕು. ನಾವೆಂದು ರ‍್ಕಾರಗಳ ನಿಯಮ, ಆದೇಶಗಳ‌ ವಿರುದ್ದ ಹೊದವರಲ್ಲ. ಕಾನೂನು ಬದ್ದವಾಗಿಯೇ ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ, ಅದನ್ನು ರ‍್ಹರು ಪಡೆಯುತ್ತಿದ್ದಾರೆ. ಈ ಬಗ್ಗೆ ರ‍್ಧಸತ್ಯ ತಿಳಿದ ಕೆಲವರು ವೇದಿಕೆ ಸಿಕ್ಕಿದೆ ಎಂದು ಸಮಾಜದ ಗುರುಗಳನ್ನು ಮತ್ತು ಸಮಾಜವನ್ನು ಕೀಳು ಭಾಷೆಯಲ್ಲಿ ಟೀಕಿಸಿದ್ದು ಇಡಿ ಕೋಲಿ ಸಮಾಜಕ್ಕೆ ನೋವು ಆಗಿದೆ. ಆ ಸಮಾಜದ ಪ್ರಜ್ಞಾವಂತರಾದರೂ ಕೆಲವರು ಆಡಿದ ಮಾತಿಗೆ ಆಕ್ಷೇಪ ಎತ್ತಿ ಕ್ಷಮೆ ಕೇಳಬೇಕಿತ್ತು. ಆದರೂ ಈ ಕೆಲಸ ಮಾಡದ ಕಾರಣ ನಾಲ್ವರ ವಿರುದ್ಧ ಪ್ರಕರಣವೂ ದಾಖಲಿಸಲಾಗಿದೆ ಎಂದರು.

ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪುರ, ತಾಲೂಕು ಅಧ್ಯಕ್ಷ ಲಿಂಗಪ್ಪ ಜಾಲಗಾರ, ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ, ವಿವಿಧ ಪದಾಧಿಕಾರಿಗಳಾದ ಭೀಮರಡ್ಡಿ ಯರಗೋಳ, ರಾಜು ಸೈದಾಪುರ, ಖಂಡಪ್ಪ ಹೊಸುರ, ದೇವೇಂದ್ರಪ್ಪ ಪಸಪುಲ್, ಬಸವರಾಜ ಕೊಳುರು, ರಾಯಪ್ಪ ಶಹಾಪುರ, ಮಹೇಶಕುಮಾರ ಬಾಡಿಯಾಳ, ದೇವೇಂದ್ರಗೌಡ, ವೆಂಕಟೇಶ ಬಂದಳ್ಲಿ, ಮುದುಕಪ್ಪ, ಮಲ್ಲಿಕರ‍್ಜುನ ಪೂಜಾರಿ, ಮರೆಪ್ಪ ಸುಣಗಾರ ಸೇರಿದಂತೆಯೇ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು