ಆ. 16ರಂದು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ದಹಿ ಹಂಡಿ ಒಡೆಯುವ ಸ್ಪರ್ಧೆ ಆಯೋಜನೆ : ಶಶಾಂಕ ನಾಲ್ವಡಿಗಿ
ಯಾದಗಿರಿ: ಗಿರಿನಗರ ಗೆಳೆಯರ ಬಳಗದ ವತಿಯಿಂದ ದಹಿ ಹಂಡಿ ಒಡೆಯುವ ಕಾರ್ಯಕ್ರಮ ಇಲ್ಲಿನ ಗಾಂದಿ ವೃತ್ತದಲ್ಲಿ ಆ. 16 ರಂದು ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಶಶಾಂತ ನಾಲ್ವಡಿಗಿ ಪ್ರಕಟಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಜರುಗುವ ಸಮಾರಂಭಕ್ಕೆ ಸ್ವಾಮೀಜಿಯವರು ಚಾಲನೆ ನೀಡುವರು, ಕಳೆದ ವರ್ಷ ಆಯೋಜಿಸಿದ್ದ ಕಾರ್ಯುಕ್ರಮ ಅಭೂತಪೂರ್ವ ಯಶಸ್ವಿಯಾಗಿದ್ದು ಇದರಿಂದ ಸ್ಪೂರ್ತಿಯಿಂದಾಗಿ ಈ ಬಾರಿ 2ನೇ ವರ್ಷದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 6 ತಂಡಗಳು ಹೆಸರು ನೋಂದಾಯಿಸಿಕೊAಡಿವೆ.
ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 11ಸಾವಿರ ರೂ. ನಗದು ಬಹುಮಾನ ವಿತರಣೆ ಮಾಡಲಾಗುವುದು. ಉಳಿದ ಭಾಗಿಯಾದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಪ್ರತಿಯೊಂದು ತಂಡಕ್ಕೂ ವಿಶೇಷ ಸಮಯಾವಕಾಶ ಒದಗಿಸಲಾಗುತ್ತದೆ. ಮಹಿಳೆಯರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೋರ್ವ ಮುಖಂಡ ದೊಡ್ಡಪ್ಪ ಚಂಡ್ರಕಿ ಮಾತನಾಡಿ ಗೆಳೆಯರ ಬಳಗದ ಸದಸ್ಯರಿಂದಲೇ ಖರ್ಚು ವೆಚ್ಚ ಭರಿಸಲಾಗುತ್ತಿದ್ದು, ಯಾವುದೆ ಹೊರಗಿನವರ ನೆರವು ಪಡೆಯದೇ ಆಯೋಜನೆ ಮಾಡುತ್ತಿದ್ದು, ಇದೊಂದು ಕೃಷ್ಣ ಜನ್ಮಾಷ್ಪಮಿ ನಿಮಿತ್ತ ಆಯೋಜಿಸಲಾಗಿರುವ ವಿನೂತನ ಯುವಕರ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
ನಗರದ ಎಲ್ಲ
ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ ಜಾಕನಳ್ಳಿ, ಸಚಿನ್ ಪಡಶೆಟ್ಟಿ, ಸಾಬು ಮುಂಡರಗಿ, ಅಭಿಷೇಕ ಸ್ವಾಮಿ ಹಿರೇಮಠ, ಸಾಬಣ್ಣ ನಾಯ್ಕಲ್, ರಾಜು ಮುದ್ನಾಳ, ರಮೇಶ ಮಡಿವಾಳರ, ಮುರುಗೇಂದ್ರ ಕಟ್ಟಿಮನಿ, ರಾಘವೇಂದ್ರ ಗೌಳಿ, ಮಹೇಶ ಚಿಂತನಳ್ಳಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ