ಶ್ರಾವಣ ಮಾಸದ ಪುರಾಣ ಪ್ರವಚನಗಳು ಯುಗ ಯುಗಗಳಿಂದಲೂ ದಾರಿದೀಪವಾಗಿ ಕೆಲಸ ಮಾಡುತ್ತಿವೆ: ವೇಣುಗೋಪಾಲ ಅಭಿಮತ

ಯಾದಗಿರಿ: ಶ್ರಾವಣ ಮಾಸದ ಪುರಾಣ, ಪ್ರವಚನ ಪುಣ್ಯಕಥಾ ಮಾಲಿಕೆಗಳು ಇಡಿ ಮಾನವ ಜನಾಂಗಕ್ಕೆ ದಾರಿದೀಪಗಳಾಗಿ ಮಾರ್ಗದರ್ಶನ ಮಾಡುತ್ತಾ ಬಂದಿರುವುದು ಯುಗಯುಗಗಳಿಂದ ನಡೆದುಕೊಂಡು ಬಂದಿದೆ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕರಾದ ಶ್ರೀ ವೇಣುಗೋಪಾಲಜಿ ಅಭಿಪ್ರಾಯಪಟ್ಟರು. 

ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯ ಶ್ರೀ ಆಂಜಿನೇಯ ದೇವಸ್ಥಾನ ಆವರಣದಲ್ಲಿ ಶ್ರಾವಣ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ 1 ತಿಂಗಳ ಪ್ರವಚನ ಹಾಗೂ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ಮಾನವ ಜನಾಂಗಕ್ಕೆ ಜಗದಾದ್ಯಂತ ಶ್ರಾವಣ ಮಾಸದ ವಿವಿಧ ಉಪನ್ಯಾಸ ಕಾರ್ಯಕ್ರಮಗಳು ಪುರಾಣ ಪ್ರವಚನಗಳು ಮಾರ್ಗದರ್ಶನ ಮಡುತ್ತಲೇ ಬಂದಿವೆ. ಸಮಸ್ತ ಮಾನವರಿಗೆ ಶ್ರಾವಣ ಮಾಸ ಪವಿತ್ರವಾಗಿದೆ ಎಂಬುದು ಇದೇ ಕಾರಣಕ್ಕೆ ಎಂದ ಅವರು, ಇಂತಹ ಪುಣ್ಯಶ್ರವಣ ಮಾಡಲಿ ಎಂಬ ಕಾರಣಕ್ಕೆ ನಮ್ಮ ಹಿರಿಯರು ಶ್ರಾವಣ ಮಾಸ ಎಂದರೆ ಅದು ಶ್ರವಣ ಮಾಸ ಇಂತಹ ಪುರಾಣ ಪುಣ್ಯಕಥೆ, ಪ್ರವಚನಗಳು ಕೇಳಲು ಮಾಡಿದ ಧಾರ್ಮಿಕ ವ್ಯವಸ್ಥೆಯಾಗಿದೆ ಎಂದರು. 

ಈ ಹಿನ್ನೆಲೆಯಲ್ಲಿ ಆಂಜಿನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸಪ್ರಯುಕ್ತ ಪ್ರವಚನ ಆಯೋಜನೆ ಮಾಡಿರುವುದು ಪರಂಪರೆಯನ್ನು ಮುಂದುವರೆಸಿಕೊAಡು ಹೋಗುವ ಪ್ರತೀಕವಾಗಿದೆ ಎಂದು ಹೇಳಿದ ಅವರು ಒಂದು ತಿಂಗಳಿನಿAದ ಶ್ರೀ ಮದ್ ವಾಲ್ಮೀಕಿ ರಾಮಾಯಣ ಪ್ರವಚನ ನಡೆಸಿಕೊಟ್ಟಿರುವುದು ಮಹತ್ವದ ಕಾರ್ಯವಾಗಿದೆ.

ಇಂದಿನ ಕುಟುಂಬ ವ್ಯವಸ್ಥೆ ನಾಶವಾಗುತ್ತಿದೆ. ಇದಕ್ಕೆ ರಾಮಾಯಣವೇ ಮದ್ದಾಗಿದೆ ಎಂದು ಅವರು ಹೇಳಿದರು. 

ರಾಮಾಯಣದಲ್ಲಿ ಅಣ್ಣತಮ್ಮಂದಿರ ಭಾಂದವ್ಯ, ಸತ್ಯ, ಪಿತೃವಚನ ಪರಿಪಾಲನೆ ಮಕ್ಕಳ ಆದ್ಯ ಕರ್ತವ್ಯವಾಗಬೇಕು ಎಂಬ ಸಂದೇಶ, ಯಾವ ತಪಸ್ಸು ಮಾಡದೇ ಇದ್ದರೂ ನಿಷ್ಕಲ್ಮಶ ಭಕ್ತಿಗೆ ದೇವರು ಒಲಿಯುತ್ತಾನೆ ಎಂಬುದಕ್ಕೆ ಶಬರಿಯ ಕಥೆಯೇ ಜ್ವಲಂತ ನಿದರ್ಶನವಾಗಿದೆ ಎಂದರು.

ಅತಿಥಿಯಾಗಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀಮತಿ ಶಾಂತಾ ಸಜ್ಜನ್ ಮಾತನಾಡಿ, ದೇಶ ವಿದೇಶಗಳಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದವರು ಸಹ ಅದನ್ನು ಬಿಟ್ಟು ಮಾತೃದೇಶಕ್ಕೆ ವಾಪಸಾಗಲು ರಾಮಾಯಣವೇ ಪ್ರೇರಣೆಯಾಗಿದೆ. ಪ್ರವಚನಕಾರರಾದ ವೇಣುಗೋಪಾಲ ಅವರು ಅಮೇರಿಕೆಯ ವಿಪ್ರೊ ಕಂಪೆನಿಯ ಅತ್ಯುನ್ನತ ಹುದ್ದೆ ಬಿಟ್ಟು ಬಂದು ದೇವರ ಸೇವೆಯಲ್ಲಿ ತೊಡಗಿಸಿಕೊಂಡರುವುದು ಸಾಕ್ಷಿಯಾಗಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ ಮಾತನಾಡಿ ರಾಮಾಯಣ ಪ್ರವಚನಗಳು ಎಲ್ಲೆಡೆ ನಡೆಯುವಂತಾಗಬೇಕು ಎಂದರು. 

ದೇವಸ್ಥಾನ ಟ್ರಸ್ಟ್ ಕಮೀಟಿಯ ಗೌರವಾದ್ಯಕ್ಷ ವೆಂಕಟೇಶ ಮಾತನಾಡಿ ಸರ್ಕಾರದ ಅನುದಾನವಿಲ್ಲದೇ ಭಕ್ತರ ಹಣದಿಂದ ದೇವಸ್ಥಾನ ಕಟ್ಟಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಶಾಂತಗೌಡ ಪೊಪಾ ಪಗಲಾಪುರ, ಕಾರ್ಯದರ್ಶಿ ಶರಣಗೌಡ ಕ್ಯಾತನಾಳ, ಕಾಳಿಂಗಪ್ಪ ನಾಯ್ಕೊಡಿ, ಸಿವಿಲ್ ಎಂಜಿನಿಯರ್ ಹೇಮಂತಕುಮಾರ, ನಿವೃತ್ತ ಉಪನ್ಯಾಸಕ ಡ.ಎಂ. ಹೊಸಮನಿ, ಟ್ರಸ್ಟ್ ಸದಸ್ಯ ಶರಣಯ್ಯ ಸ್ವಾಮಿ ಇದ್ದರು. ವೆಂಕೋಬ ನಿರೂಪಿಸಿದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು