ದೇವದುರ್ಗದ ಐಬಿಗೆ ಯಾಕೆ ಹೋಗಿದ್ದರು?;‘ಮಾನನಷ್ಟ ಮೊಕದ್ದಮೆ ಹೂಡುವೆ’
ಕಟಕಟಿ ಒಬ್ಬ ಇಂಗು ತಿಂದ ಮಂಗ; ಗುಡುಗಿದ ಬೋರಬಂಡಾ ತಿರುಗೇಟು
ಯಾದಗಿರಿ: ಗುರಮಠಕಲ್ ಕ್ಷೇತ್ರದ ಅಭಿವೃದ್ಧಿ ಪರ ಸದನದಲ್ಲಿ ಶಾಸಕರು ಮಾತನಾಡಲಿ ಎಂದು ಸಲಹೆ ನೀಡಿದರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಇಂಗು ತಿಂದ ಮಂಗನAತಾಗಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಾಯಿಬಣ್ಣಾ ಬೋರಬಂಡಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜಕೀಯ ಮಾಡುವವರು ಪಕ್ಷಾಂತರ ಮಾಡುವುದು ಸಾಮಾನ್ಯ. ಆದರೆ ಶರಣಗೌಡ ಈ ಹಿಂದೆ ದೇವದುರ್ಗದ ಐಬಿಗೆ ರಾತ್ರಿ 2 ಗಂಟೆಗೆ ತೆರಳಿ, ಆಡಿಯೋ ರಿಲೀಸ್ ಮಾಡಿದ್ದು ಯಾವ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು? ಉತ್ತರ ಕರ್ನಾಟಕವೇ, ಕಲ್ಯಾಣ ಕರ್ನಾಟಕವೇ ಅಥವಾ ಗುರಮಠಕಲ್ ಕ್ಷೇತ್ರದ ಬಗ್ಗೆಯೇ ಇದಕ್ಕೆ ಕಟಕಟಿ ಮೊದಲು ಉತ್ತರ ಕೊಡಲಿ ಎಂದಿದ್ದಾರೆ.
ಕAದಕೂರ ಜಾತಿ, ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಬೋರಬಂಡಾ ಸೋಲ್ಡ್ ಔಟ್ ಎಂದು ಹೇಳಿರುವ ಕಟಕಟಿ ಅವರೆ, ಹಿಂದೆ ತಾವು ಜಿಪಂ ಸದಸ್ಯರಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದ ಕ್ಷಣದಿಂದಲೇ ನಿಮ್ಮ ನಾಯಕರ ರಾಜಕೀಯ ಜೀವನ ಆರಂಭಗೊAಡ ಬಗ್ಗೆ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದಿದ್ದಾರೆ.
ನಾನು ಸತತ ಮೂರು ದಶಕಗಳಿಂದ ಗುರಮಠಕಲ್ ಕ್ಷೇತ್ರದಲ್ಲಿ ರಾಜಕೀಯ ಮಾಡಿದ ಕಾರಣದಿಂದಲೇ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನಾಗಿ ಹಾಗೂ ನನ್ನ ಪತ್ನಿ ಅವರು ಜಿಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು ಕಟಕಟಿ ಮರೆತಂತೆ ಕಾಣುತ್ತಿದೆ. ಇನ್ನೂ ಕ್ಷೇತ್ರದ ಅಭಿವೃದ್ಧಿಗಾಗಿ ಕೆರೆ ತುಂಬುವ ಯೋಜನೆ ಸಾಕಾರಗೊಳಿಸಿದ್ದೂ ನಾನೆ. ಆದರೆ, ಶಾಸಕ ಶರಣಗೌಡ ಕಂದಕೂರ ಈ ಘನಾಂದಾರಿ ಕೆಲಸ ತಾನೇ ಮಾಡಿಸಿದ್ದೇನೆ ಎಂದು ಮತ್ತೊಬ್ಬರ ಸಾಧನೆಯನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕೆರೆ ತುಂಬುವ ಯೋಜನೆಯ ಬಗ್ಗೆ ಕಟಕಟಿ ಹಾಗೂ ಶಾಸಕ ಕಂದಕೂರ ದಮ್ ಇದ್ದರೆ, ನನ್ನೊಡನೆ ಬಹಿರಂಗ ಚರ್ಚೆಗೆ ಬರಲಿ. ಗುರಮಠಕಲ್ ಶಾಸಕ ಕಂದಕೂರ ಮತ್ತವರ ಪಟಾಲಂ ಟೀಮ್ ನ ಕೆಲಸಗಳನ್ನು ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಲ ಬಂದಾಗ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡುವೆ:
ನನ್ನ ಬಗ್ಗೆ ಹಗುರ ಪದ ಉಪಯೋಗ ಮಾಡಿರುವ ಕಟಕಟಿ ಬರುವ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ನಾನು ಎಲ್ಲಿ, ಯಾರಿಗೆ ಸೇಲ್ ಆಗಿದ್ದೇನೆ ಎಂಬುದಕ್ಕೆ ದಾಖಲೆ ಒದಗಿಸಲಿ, ತಪ್ಪಿದಲ್ಲಿ ಯಾರನ್ನೊ ಮೆಚ್ಚಿಸಲು ಉಡಾಫೆಯ ಹೇಳಿಕೆ ನೀಡಿದರೆ ಅದರ ವಿರುದ್ಧ ಮಾನನಷ್ಡ ಮೊಕದ್ದಮೆ ಹೂಡಲು ನಾನು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಸಾಯಿಬಣ್ಣಾ ಬೋರಬಂಡಾ ಖಾರವಾದ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ