ಸಿಎಂ ಸ್ಥಾನ ಸಿಗುತ್ತೆಂದರೆ ನಾನು ಚನ್ನಾರಡ್ಡಿ ಇಬ್ಬರು ಆರ್ ಆರ್ ಎಸ್ ಗೀತೆ  ಹಾಡುತ್ತೆವೆ: ಸಚಿವ ಜಾರಕಿಹೊಳಿ ಪರೋಕ್ಷ ಟಾಂಗ್

ಯಾದಗಿರಿ : ಆರ್ ಎಸ್ ಎಸ್ ಗೀತೆ ಹಾಡಿದರೇ ಮುಖ್ಯಮಂತ್ರಿ ಸ್ಥಾನ ಸಿಗುವಂತಿದ್ದರೇ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಎಂದಿನ ತಮ್ಮ ಸಹಜ ಶೈಲಿಯಲ್ಲಿ ಕೂಲಾಗಿಯೇ ಟಾಂಗ್ ನೀಡುವ ಗತ್ತಿನಲ್ಲಿ ಪ್ರತಿಕ್ರಿಯಿಸಿದರು. 

ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆರ್.ಎಸ್.ಎಸ್. ಗೀತೆ ಹಾಡುತ್ತಿದ್ದಾರೆ. ಸಂತೋಷ ಪರ ಬ್ಯಾಟ್ ಮಾಡುತ್ತಿದ್ದಾರೆ ಎಂದು ಗಮನ ಸೆಳೆದಾಗ ಡಿಕೆ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಮಾತಾಡಿದರು ಹಾಡುಹಾಡಿದರು ಎಂದ ಮಾತ್ರಕ್ಕೆ ಪರ ಇಲ್ಲವೇ ವಿರೋಧ ಮಾಡಿದ ಮಾತ್ರಕ್ಕೆ ದ್ವೇಶ ಮಾಡುತ್ತಾರೆ ಎಂದು ಭಾವಿಸುವುದು ಬಾಲಿಷತನೆಂಬರ್ಥದಲ್ಲಿ ಜಾರಕಿಹೊಳಿ ಪ್ರತಿಕ್ರಿಯಿಸಿದರು. 

ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು. 

ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಗೆ ಅಂತಹದ್ದು ಏನು, ಅದೆಲ್ಲ ಪಕ್ಷದ ಕೇಂದ್ರ ಸಮಿತಿಗೆ ಬಿಟ್ಟಿದ್ದು ಎಂದರು. ಮಾಜಿ ಸಚಿವ ರಾಜಣ್ಣ ಅವರು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದು ಹೈಕಮಾಂಡಗೆ ಬಿಟ್ಟಿದ್ದು ಎಂದರು. ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಸುಳ್ಳು ಎಂದರು.

ಬುರುಡೆ ಚಿನ್ನಯ್ಯ ಅರೆಸ್ಟ್ ಆದ ಬಗ್ಗೆ ಕೇಳಿದ ಪ್ರಶ್ನೆಗೆ ಧರ್ಮಸ್ಥಳ ಒಂದು ಊರು. ಅದೇನು ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಕೋರ್ಟ್ ಆದೇಶದಂತೆಯೇ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕು ಅದು ಬರುತ್ತದೆ. ನೀವೇ ಅದು ದೊಡ್ಡದಾಗಿ ನಿತ್ಯ ಬಿಂಬಿಸುತ್ತಿದ್ದಿರಿ ಎಂದು ಮಾಧ್ಯಮದವರ ಕಡೆ ಸಚಿವರು ಬೊಟ್ಟು ಮಾಡಿದರು.

ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಇದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು