ನಿಲ್ಲದ 13 ಕ್ಕೂ ಹೆಚ್ಚು ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಿ, ರೈಲ್ವೆ ಬೇಡಿಕೆಗಳು ಈಡೇರಿಸಿ: ಟಿಎನ್‌ಭೀ
ಯಾದಗಿರಿ: ಜಿಲ್ಲೆಯಾಗಿ 14 ವರ್ಷಗಳೇ ಕಳೆದರೂ ನಗರದಲ್ಲಿ ಸರಿಸುಮಾರು 13ಕ್ಕೂ ಹೆಚ್ಚು ರೈಲುಗಳ ನಿಲುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ ಕೂಡಲೇ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ, ಯಾದಗಿರಿ ಜಿಲ್ಲೆಯಾಗಿ ಸುದೀರ್ಘ ಅವಧಿ ಕಳೆದರೂ ಸಹ ರೈಲ್ವೆ ಇಲಾಖೆ ಇನ್ನು ಇತ್ತ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈಲ್ವೆ ನೂತನ ಸಚಿವ ವಿ. ಸೋಮಣ್ಣನವರು ಈ ಭಾಗದ ದೀರ್ಘ ಕಾಲದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್(22691/22692), ಪದ್ಮಾವತಿ ಎಕ್ಸ್ಪ್ರೆಸ್ (12731/12732), ರಾಜಕೋಟ್ ಎಕ್ಸ್ಪ್ರೆಸ್ (16613/16641), ದ್ವಾರಕಾ ಎಕ್ಸ್ಪ್ರೆಸ್ (19567/19568), ವಾಸ್ಕೋ ಎಕ್ಸ್ಪ್ರೆಸ್ (17321/17322), ಏಕ್ತಾನಗರ ಎಕ್ಸ್ಪ್ರೆಸ್ (20919/20920), ಸಾಯಿನಗರ ಶಿರಡಿ (22601/22602, ಅಹ್ಮದಾಬಾದ್ ಎಕ್ಸ್ಪ್ರೆಸ್ (22689/22690) ಮಧುರೈ ಎಕ್ಸ್ಪ್ರೆಸ್ 22101/22102, ತಿರುಪತಿ ಹಮ್‌ಸಫರ್ ಎಕ್ಸಪ್ರೆಸ್ (22705/22706, ಗೋರಖಪುರ ಎಕ್ಸ್ಪ್ರೆಸ್ 22533/22534, ಅಹ್ಮದಾಬಾದ್ ಹಮ್ ಸಫರ್ ಎಕ್ಸ್ಪ್ರೆಸ್ (22191/22920, ಮತ್ತು ಗೋರಖಪುರ ಎಕ್ಸ್ಪ್ರೆಸ್ 12591/12592 ಸೇರಿ ಒಟ್ಟು 13 ರೈಲುಗಳು ವಾರದ ಹಾಗೂ ಕೆಲ...