ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ;ಅಧಿಸೂಚನೆ ಪ್ರಕಟ
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೌಕರರ ಯಾದಗಿರಿ ವಿಭಾಗೀಯ ಪತ್ತಿನ ಸಹಕಾರ ಸಂಘ ನಿ, ಇದರ ನೂತನ 15 ಜನ ನಿರ್ದೇಶಕರ ಆಯ್ಕೆಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ.
ಈ ಕುರಿತು ಅಧಿಸೂಚನೆ ಹೊರಿಡಿಸಿರುವ ಚುನಾವಣಾಧಿಕಾರಿ ಆರ್. ಪವನಕುಮಾರ್ ಸಹಕಾರ ಸಂಘಕ್ಕೆ ಚುನಾವಣೆಗೆ ಪ್ರಕ್ರಿಯೆ ಆರಂಭಗೊAಡಿದ್ದು, ಕೆಎಸ್‌ಆರ್.ಟಿ.ಸಿ. ಯಾದಗಿರಿ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿರುವ ಕಚೇರಿಯಲ್ಲಿ ದಿ: 07-09-2024 ರಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ದಿ: 13-09- 2024 ನಾಮಪತ್ರ ಸಲ್ಲಿಕೆಗೆ ಕೊನೆಯವಾಗಿದೆ. ದಿನಾಂಕ: 14-09-2024 ರಂದು ನಾಮಪತ್ರ ಪರಿಶೀಲನೆ ಮತ್ತು ದಿನಾಂಕ: 15-09-2024, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯನ್ನು ದಿನಾಂಕ: 17-09-2024 ಮಾಡಲಾಗುತ್ತದೆ ಕೊನೆಗೆ ದಿನಾಂಕ: 22-09-2024.ರಂದು ಅಗತ್ಯವಿದ್ದಲ್ಲಿ ಮತದಾನ ನಡೆಲಸಾಗುವುದು ಮತ್ತು ಅಂದೇ ಫಲಿತಾಂಶ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ