ಜೆಸ್ಕಾಂ ಇಇ ಕಚೇರಿ ಮುಂದೆ ರೈತರಿಂದ ಭಾರಿ ಪ್ರತಿಭನೆ
ಸರ್ಕಾರ ರೈತರ ಪಂಪ್ ಸೇಟ್ ಗೆ ಆಧಾರ ಕಾರ್ಡ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದೆ:
ಯಾದಗಿರಿ: ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ದ ಜಿಲ್ಲಾ ಘಟಕ ವತಿಯಿಂದ ಇಲ್ಲಿನ ಜೆಸ್ಕಾಂ ಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಎಚ್.ಆರ್. ಬಡಿಗೇರ ಅವರ ನೇತೃತ್ವದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಇಇ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯ÷್ಕಷ ಎಚ್.ಆರ್. ಬಡಿಗೇರ, ಕೃಷಿ ಪಂಪ್‌ಸೆಟ್‌ಗಳಿಗೆ ಆರ್.ಆರ್. ನಂಬರ್‌ಗೆ ಆಧಾರ ಕಾರ್ಡ ನಂಬರ ಜೋಡಣೆ ಮಾಡುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುವ ನಿಟ್ಟಿನಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ದಿನಾಂಕ: 22-09-2023 ರಿಂದ ಟಿ.ಸಿ. ವಿದ್ಯುತ್ ಕಂಬಗಳು, ವೈರ್‌ಗಳು, ಇತರೆ ಸಾಮಾಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕರಾಳ ಕಾನೂನು ಜಾರಿಗೊಳಿಸಿದೆ.
ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ 2000 ಇಸ್ವಿಯಲ್ಲಿ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ರವರ ಸರ್ಕಾರದ ನೀತಿಗಳ ವಿರುದ್ಧ 2001 ರಲ್ಲಿ ಹೋರಾಟದ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ರೈತರಿಗೆ ಉಚಿತ ವಿದ್ಯುತ್ ಪಡೆಯಲಾಯಿತು.
ರಾಜ್ಯದಲ್ಲಿ ರೈತರ ಕೊಳವೆ ಬಾವಿಗಳ ಆಶ್ರಯದಲ್ಲಿ ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಿ ಕಾನೂನು ಬದ್ಧಗೊಳಿಸುವವರೆಗೂ ಕೃಷಿ ಕ್ಷೇತ್ರಕ್ಕೆ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಬೇಕಾಗಿರುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಇವೆಲ್ಲವನ್ನು ಮಾಡುವುದು ಬಿಟ್ಟು ಮಗ ಎಲ್ಲ ಬಿಟ್ಟು ಭಂಗಿ ನೆಟ್ಟ ಎಂಬAತೆ ರಾಜ್ಯ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಈ ಎಲ್ಲ ರೈತ ವಿರೋಧಿ ನೀತಿಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಮಲ್ಲ್ಲಿಕಾರ್ಜುನಸ್ವಾಮಿ ಪರಸನಹಳ್ಳಿ ಮಾತನಾಡಿ 1) ಕೃಷಿ ಪಂಪ್‌ಸೆಟ್ಗಳಿಗೆ ಆಧಾರ ನಂಬರ್ ಜೋಡನೆ ಮಾಡುವುದನ್ನು ತತಕ್ಷಣ ಕೈಬಿಡಬೇಕು., 2) ಕೃಷಿ ಪಂಪ್ ಸೆಟ್‌ಗಳಿಗೆ 07-10-2023 ರಿಂದ ಜಾರಿಗೊಳಿಸಿರುವ ಸದರಿ ಆದೇಶ ಸಂಖ್ಯೆ ಪಿ. 475/2023 ರಂದು ಮಾಡಿರುವ ಕಾನೂನು ರದ್ದು ಮಾಡಿ ಹಿಂದಿನAತೆ ರೈತರಿಗೆ ನಿದ್ಭುತ ಪರಿವರ್ತಕ ಕಂಬ ವಾಯರ ಇತರೆ ಉಪಕರಣಗಳನ್ನು ಉಚಿತವಾಗಿ ಇಲಾಖೆ ಸರಬರಾಜು ಮಾಡಿ ಸಮರ್ಶಕ ವಿದ್ಯುತ್ ನೀಡಬೇಕು, 3) ಮನೆ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿರುವ ಸರ್ಕಾರ ಹೆಚ್ಚಿಸಿರುವ ಯೂನಿಟ್ ಧರವನ್ನು ಕಡಿಮೆ ಮಾಡಬೇಕು., 4) ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು., 5) ಸೋಲಾರ್ ಸಂಪರ್ಕ ಹೊಂದುವ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಆದೇಶವನ್ನು ಕೈ ಬಿಡಬೇಕು., 6) ನಗರ ಮತ್ತು ಹಳ್ಳಿಗಳಲ್ಲಿ ತಾರತಮ್ಯವಿಲ್ಲದೆ ವಿದ್ಯುತ್ ಸಮಾನ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಚೆನ್ನಾರಡ್ಡಿ ಪಾಟೀಲ್ ಗುರುಸುಣಿಗಿ, ಸಿದ್ದರಾಮ ತಳ್ಳಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಬೇಬಿ ಎ. ರಾಠೋಡ, ಯಮನಪ್ಪಗೌಡ ಕುಂಬಾರ, ಧರ್ಮಣ್ಣ ಮಳ್ಳಿಕೇರಿ, ಮಹಿಬೂಬ ದಪ್ಪೆದಾರ, ಶಿವು ಮಾಳಿಕೇರಿ, ಮಲ್ಲು ತುಂಬಗಿ, ಗುರಪ್ಪ ಕುಂಬಾರ, ಶಿವಲಿಂಗಯ್ಯ ಸ್ವಾಮಿ, ಬಸವರಾಜ ಬುದೂರ, ವಿಕ್ರಮ್ ಪರಸನಳ್ಳಿ, ಸಾಯಿಬಣ್ಣ ವಜ್ಜಲ್, ಮುದುಕಣ್ಣ ವಜ್ಜಲ್, ಕಕ್ಕೇರಾ ಹೋಬಳಿ ಅಧ್ಯಕ್ಷ ಗೋವಿಂದ ಪತ್ತಾರ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.
.jpeg)
.jpeg)
.jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ