ಯಾದಗಿರಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಮೌನೇಶ ಗಿರೆಪ್ಪನೋರ್ ಅವಿರೋಧ ಆಯ್ಕೆ
ಯಾದಗಿರಿ: ಜಿಲ್ಲಾ ಛಾಯಾಗ್ರಾಹಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಛಾಯಾಗ್ರಾಹಕ ಮೌನೇಶ ಗಿರೆಪ್ನೋರ್ ಅವಿರೋಧವಾಗಿ ಆಯ್ಕೆ ಯಾದರು.
ನಗರದ ಜಿಲ್ಲಾ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳಾಗಿ ಶೇಕ್ ಸರ್ದಾರ್ (ಉಪಾಧ್ಯಕ್ಷ), ಈಶ್ವರ ಬಲಕಲ್ (ಕಾರ್ಯದರ್ಶಿ), ಬಾಬು ಮೋಸಸ್ (ಸಹ ಕಾರ್ಯದರ್ಶಿ), ಅಜ್ಹರೋದಿನ್ (ಖಂಜಾಚಿ) ಆಯ್ಕೆಯಾದರು.
ಸಭೆಯಲ್ಲಿ ಸಂಘದ ಹಿರಿಯ ಮುಖಂಡರಾದ ಧರ್ಮಣ್ಣ ಗಿರೆಪ್ನೋರ್, ವಸಿಂ ಅಹಮದ್, ಗಿಡಿಯೋನ್ ಮೋಸೆಸ್, ಅಬ್ದುಲ್ ಅಲಿಂ, ನಂದಕುಮಾರ್, ಉಮಾರ್, ಏಜಾಜ್, ಮುಂತಾದ ಛಾಯಾಗ್ರಹಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ