2 ದಿನಗಳ ಜಮಾತೆ ಅಹ್ಮದೀಯಾ ಸಂಘಟನೆಯ ‘ಲಜ್ನಾ ಇಮಾಹಿಯುಲ್ಲಾ’ ಜಿಲ್ಲಾ ಸಮ್ಮೇಳನ ಸಂಪನ್ನ
ಯಾದಗಿರಿ: ಜಮಾತೆ ಅಹ್ಮದೀಯಾ ಸಂಘಟನೆಯ ಲಜ್ನಾ ಇಮಾಹಿಯುಲ್ಲಾಹ್ (ಮಹಿಳಾ ಘಟಕ) ಮತ್ತು ನಾಸಿರಾತುಲ್ ಅಹ್ಮದೀಯಾ (ಕಿಶೋರಿಯರ ಸಂಘ) ದ ಎರಡು ದಿನಗಳ ಯಾದಗಿರಿ- ಕಲ್ಬುರ್ಗಿ ಜಿಲ್ಲಾ ಸಮ್ಮೇಳನ ಶಹಾಪೂರ ಪೇಟ್ ನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಜರುಗಿತು.
ಲಜ್ನಾ ಇಮಾಹಿಯುಲ್ಲಾಹ್ ಜಿಲ್ಲಾದ್ಯಕ್ಷೆ ಶ್ರೀಮತಿ ಮೆಹೆಮೂದಾ ನಯಿಮ್ ಸಗ್ರಿ ಮಾತನಾಡಿ, ನಮ್ಮ ಮಹಿಳಾ ಸಂಘಟನೆ (ಲಜ್ನಾ) ದ್ವಿತಿಯ ಖಲೀಫಾರಾದ ಹಜರತ್ ಮಿರ್ಜಾ ಬಷೀರುದ್ದೀನ್ ಮೆಹೆಮೂದ ಅವರ ಕಾಲದಲ್ಲಿ ಅಂದರೆ 1822 ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಈ ವಿಂಗ್ ನ ಉದ್ದೇಶವೇನೆಂದರೆ, ೆ ಮಹಿಳೆಯರು ಹೇಗೆ ಮಕ್ಕಳ ಪಾಲನೆ ಪೋಷಣೆ ಜವಬ್ದಾರಿ ಹಾಗೂ ಹೊಣೆಗಾರಿಕೆಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾ ಬರುತ್ತಿದೆ. ಮಕ್ಕಳು ಬೆಳೆಸುವಾಗ ದೇವರ ಬಗ್ಗೆ ಭಯ ಭಕ್ತಿ ಕಲಿಸಿಕೊಡುವ ಕೆಲಸ ಮಾಡಬೇಕೆಂದು ತಿಳಿಸುತ್ತದೆ. ಮಕ್ಕಳು ಮಾನವೀಯತೆಯನ್ನು ಗುರ್ತಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು.
ಮತ್ತು ಮಹಿಳೆಯರು ಟಿವಿ ಇಂಟರನೆಟ್ ನಲ್ಲಿನ ಕೆಟ್ಟ ಅಂಶಗಳಿAದ ದೂರವಿರಬೇಕೆಂದು ಸಲಹೆ ನೀಡಿದರು. ಖಂಡಿತವಾಗಿಯೂ ನೀವು ಮಾಡುವ ಉತ್ತಮ ಕಾರ್ಯಗಳೇ ನಿಮ್ಮ ಮಕ್ಕಳಿಗೆ ಒಳಿತನ್ನು ಮಾಡುತ್ತವೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು.
ದೇವರ (ಅಲ್ಲಾನ) ಕಡೆ ಭಕ್ತಿ ಹಾಗೂ ವಿಶ್ವಾಸ ಹೊಂದಿದ್ದರೆ ಖಂಡಿತವಾಗಿ ನಿಮಗೆ ದೇವರ ಒಲುಮೆ ಹಾಗೂ ಕೃಪೆ ಆಗುತ್ತದೆ. ಉತ್ತಮ ಕಾರ್ಯ ಮಾಡಿದರೆ ಉತ್ತಮ ಗುಣವುಳ್ಳ ಸಂತಾನ ಸಿಗುತ್ತದೆ ಕೆಟ್ಟ ಕಾರ್ಯ ಮಾಡಿದರೆ ಅತ್ಯಂತ ಕೆಟ್ಟಾಗುತ್ತದೆ ಒಳ್ಳೆಯ ಮಕ್ಕಳಿಂದ ದೇಶಕ್ಕೂ ಧರ್ಮಕ್ಕೂ ನಿಮಗೂ ಎಲ್ಲರಿಗೂ ಒಳ್ಳೆಯದು ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಎಲ್ಲರೊಂದಿಗೆ ಪ್ರೀತಿ ಯಾರೊಂದಿಗೂ ದ್ವೇಶವಿಲ್ಲ ಎಂಬ ಅಹ್ಮದೀಯ ಸಂಘಟನೆಯ ಘೋಷವಾಕ್ಯವನ್ನು ನಾವು ಸಹ ಎಂದಿಗೂ ಮರೆಯದೇ ಪಾಲಸಬೇಕು ಎಂದು ಅವರು ಒತ್ತಿ ಹೇಳಿದರು.
ವೇದಿಕೆ ಮೇಲೆ ರಾಯಚೂರು ಲಜ್ನಾ ಜಿಲ್ಲಾಧ್ಯಕ್ಷೆ ಫರಹತ್ ಸಾಲಿಕ್, ವಿಜಯಪುರ-ಧಾರವಾಡ ಜಿಲ್ಲಾಧ್ಯಕ್ಷ ಫಹಿಮುನ್ನಿಸಾ ಬೇಗಂ, ಕಲ್ಬುರ್ಗಿ ನಗರ ಅಧ್ಯಕ್ಷೆ ಶ್ರೀಮತಿ ಹಮೀದಾ ನಾಹಿದ್, ಯಾದಗಿರಿ ನಗರ ಅಧ್ಯಕ್ಷೆ ಶ್ರಿಮತಿ ಬದರ್ ಫರೀದ್, ಸುರಪುರನ ತಿಮ್ಮಾಪುರ ಅಧ್ಯಕ್ಷೆ ಶ್ರೀಮತಿ ಅಮ್ತುಲ್ ನಸೀರ್, ಯಡ್ಡಳ್ಳಿ ಗ್ರಾಮ ಘಟಕದ ಅಧ್ಯಕ್ಷೆ ಶ್ರೀಮತಿ ರಶೀದಾ ಸಲಿಮ್ ಉಪಸ್ಥಿತರಿದ್ದುರ.
ಇದೇ ಸಂದರ್ಭದಲ್ಲಿ ಕ್ವಿಜ್ ಸೇರಿದಂತೆ ಇನ್ನಿತರ ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊದಲಿಗೆ ಖುರಾನ್ ಪಠಣ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊAಡಿತು. ಮೆಹಮೂದಾ ನಯಿಮ್ ಸಗ್ರಿ ವಂದಿಸಿ ಧನ್ಯವಾದ ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ