ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ರಾಜ್ಯಮಟ್ಟದ ಟೆನಿಸ್ ನಲ್ಲಿ ಯಾದಗಿರಿಯ ಮಲ್ಲಿಕಾರ್ಜುನ ಯಾದವ್ ರಾಜ್ಯಕ್ಕೆ ಪ್ರಥಮ, ಡಬ್ಬಲ್ಸ್ ನಲ್ಲಿ ಸೆಮಿಸ್ ಸಾಧನೆ ಯಾದಗಿರಿ ಟೈಮ್ಸ್ ವಾರ್ತೆ | 17.12.24 ಯಾದಗಿರಿ: ದಾವಣಗೆರೆಯಲ್ಲಿ ಜರುಗಿದ ಕರ್ನಾಟಕದ ರಾಜ್ಯ ಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿಯಲ್ಲಿ ಯಾದಗಿರಿಯ ಮಲ್ಲಿಕಾರ್ಜುನ್ ಯಾದವ್ 35+ ವರ್ಷದ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಟ್ರೊಫಿ ತಮ್ಮದಾಗಿಸಿಕೊಂಡಿದ್ದಾರೆ.  ಡಿಸೆಂಬರ್ 13-15 ರಂದು ಎರಡು ದಿನಗಳ ಕಾಲ ಜರುಗಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಯಾದಗಿರಿಗೆ ಕೀರ್ತಿ ತಂದಿದ್ದಾರೆ.  ಇದಲ್ಲದೇ ಡಬ್ಬಲ್ಸ್ ಪಂದ್ಯಾವಳಿಯಲ್ಲಿ ಜಗದೀಶ್ ಹೆಂದೆ ಹಾಗೂ ಮಲ್ಲಿಕಾರ್ಜುನ್ ಯಾದವ್ ಅವರು 35 + ವಯೋಮಾನದವರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಮಟ್ಟಕ್ಕೇರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.  ಹರ್ಷ: ರಾಜ್ಯದ ವಿವಿಧೆಡೆಯಿಂದ ಸುಮಾರು 400ಕ್ಕೂ ಮಿಕ್ಕಿ ಆಟಗಾರರು ಭಾಗವಹಿಸಿದ್ದ ಮಹತ್ವದ ಪಂದ್ಯಾವಳಿಯಲ್ಲಿ ಯಾದಗಿರಿಗೆ ಪದಕ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಉಭಯ ಆಟಗಾರರ ಸಾಧನೆಗೆ ಯಾದಗಿರಿ ಟೆನ್ನಿಸ್ ಕ್ಲಬ್ ಪರವಾಗಿ ಡಾ. ಪ್ರದೀಪರಡ್ಡಿ ಹರ್ಷ ವ್ಯಕ್ತಪಡಿಸಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
ಇಮೇಜ್
 ಜಿಲ್ಲಾ ಕಶಸಾಪಗಳಿಂದ ಅಭಿನಂದನಾ ಸ್ವೀಕರಿಸಿದ ಗೋರುಚ ಉವಾಚ;  ಮಾನವ ಪೋಷಕವಾಗಬೇಕಿದ್ದ ಧರ್ಮ, ಸಮಾಜ, ರಾಜಕೀಯ ವ್ಯವಸ್ಥೆಗಳು ಮಾರಕವಾಗಿವೆ ಇದಕ್ಕೆ ಸಾಹಿತ್ಯ, ಸಂಸ್ಕೃತಿಯೇ ಮದ್ದು:  ಯಾದಗಿರಿ: ಧರ್ಮ, ಸಮಾಜ ಮತ್ತು ರಾಜಕೀಯ ವ್ಯವಸ್ಥೆಗಳು ಮಾನವ ಅಸ್ತಿತ್ವಕ್ಕೆ ಪೊಷಕವಾಗಿ ನಿಲ್ಲಬೇಕಾದವುಗಳು ಇಂದಿನ ದಿನಮಾನಗಳಲ್ಲಿ ಮಾರಕಗಳಾಗಿ ನಿಂತAತಿವೆ ಎಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ   ಪ್ರೊ|| ಗೋರೂ ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.  ನಗರದ ಕಸಾಪ ಭವನದಲ್ಲಿ ರವಿವಾರ ಬೆಳಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  ದೇಶ ರಾಜ್ಯದಲ್ಲಿ ಇಂದು ವರ್ಗ ಸಂಘರ್ಷಗಳು, ಆರ್ಥಿಕ ಸಂಘರ್ಷಗಳು, ಭಯೋತ್ಪಾದನೆ, ಹೆಣ್ಣಿನ ಮೇಲೆ ಅತ್ಯಾಚಾರ, ಧರ್ಮಗುರುಗಳ ಕರ್ಮಕಾಂಡ, ರಾಜಕೀಯ ಅನೈತಿಕತೆ, ಅಧಿಕಾರ ದುರುಪಯೋಗ, ಉಳ್ಳವರ ಆಡಂಬರ, ಇಲ್ಲದವರ ಸಂಕಟಗಳು ಹೆಚ್ಚುತ್ತಲೇ ಇವೆ ಇಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಇಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ನಡೆಯುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.  ಇಂತಹ ವಿಷಮ ಪರಿಸ್ಥಿತಿಗೆ ಸಾಹಿತ್ಯ ಪರಿಹಾರ ಹುಡುಕಬಲ್ಲದು ಜನತೆ ಸುಸಂಸ್ಕೃತರಾದಲ್ಲಿ ಇಂತ...