ಜಿಲ್ಲಾ ಕಶಸಾಪಗಳಿಂದ ಅಭಿನಂದನಾ ಸ್ವೀಕರಿಸಿದ ಗೋರುಚ ಉವಾಚ; 

ಮಾನವ ಪೋಷಕವಾಗಬೇಕಿದ್ದ ಧರ್ಮ, ಸಮಾಜ, ರಾಜಕೀಯ ವ್ಯವಸ್ಥೆಗಳು ಮಾರಕವಾಗಿವೆ ಇದಕ್ಕೆ ಸಾಹಿತ್ಯ, ಸಂಸ್ಕೃತಿಯೇ ಮದ್ದು: 

ಯಾದಗಿರಿ: ಧರ್ಮ, ಸಮಾಜ ಮತ್ತು ರಾಜಕೀಯ ವ್ಯವಸ್ಥೆಗಳು ಮಾನವ ಅಸ್ತಿತ್ವಕ್ಕೆ ಪೊಷಕವಾಗಿ ನಿಲ್ಲಬೇಕಾದವುಗಳು ಇಂದಿನ ದಿನಮಾನಗಳಲ್ಲಿ ಮಾರಕಗಳಾಗಿ ನಿಂತAತಿವೆ ಎಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ   ಪ್ರೊ|| ಗೋರೂ ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು. 

ನಗರದ ಕಸಾಪ ಭವನದಲ್ಲಿ ರವಿವಾರ ಬೆಳಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ದೇಶ ರಾಜ್ಯದಲ್ಲಿ ಇಂದು ವರ್ಗ ಸಂಘರ್ಷಗಳು, ಆರ್ಥಿಕ ಸಂಘರ್ಷಗಳು, ಭಯೋತ್ಪಾದನೆ, ಹೆಣ್ಣಿನ ಮೇಲೆ ಅತ್ಯಾಚಾರ, ಧರ್ಮಗುರುಗಳ ಕರ್ಮಕಾಂಡ, ರಾಜಕೀಯ ಅನೈತಿಕತೆ, ಅಧಿಕಾರ ದುರುಪಯೋಗ, ಉಳ್ಳವರ ಆಡಂಬರ, ಇಲ್ಲದವರ ಸಂಕಟಗಳು ಹೆಚ್ಚುತ್ತಲೇ ಇವೆ ಇಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಇಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ನಡೆಯುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. 

ಇಂತಹ ವಿಷಮ ಪರಿಸ್ಥಿತಿಗೆ ಸಾಹಿತ್ಯ ಪರಿಹಾರ ಹುಡುಕಬಲ್ಲದು ಜನತೆ ಸುಸಂಸ್ಕೃತರಾದಲ್ಲಿ ಇಂತಹ ಸಮಸ್ಯೆಗಳು ಪರಿಹಾರವಾಗುತ್ತವೆ ಎಲ್ಲಿಯವರೆಗೆ ಜನತೆ ಸುಸಂಸ್ಕೃತಿಯತ್ತ ವಾಲುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗಳಿಂದ ಪರಿಹಾರವಿಲ್ಲ ಈ ನಿಟ್ಟಿನಲ್ಲಿ ಸಾಹಿತಿಗಳು, ಉತ್ತಮ ಸಮಾಜಕ್ಕಾಗಿ ಚಿಂತಿಸುವವರು ಶ್ರಮಿಸಬೇಕಿದೆ ಎಂದರು. 

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ತಮ್ಮನ್ನು ಆಯ್ಕೆ ಮಾಡಿರುವುದು ಒಂದು ಬಯಸದೇ ಬಂದ ಭಾಗ್ಯವಾಗಿದೆ ಎಂದು ಹೇಳಿದ ಅವರು, ಸಾಹಿತ್ಯಿಕವಾಗಿ ಜನರು ಎತ್ತರಕ್ಕೆ ಏರಿದಾಗ ಈ ಪಿಡುಗುಗಳಿಂದ ಮುಕ್ತರಾಗಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. 

ಗುರುಮಠಕಲ್ ಖಾಸಾಮಠದ ಶ್ರೀ ಮನಿಪ್ರ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ ಸಜ್ಜನ ಶ್ರೇಷ್ಠರಾದ ಗೋರುಚನ್ನಬಸಪ್ಪ ಅವರ ಸಮ್ಮೇಳನ ಸರ್ವಾಧ್ಯಕ್ಷತೆ ಆಯ್ಕೆ ಅತ್ಯಂತ ಸಮಯೋಚಿತ ಹಾಗೂ ಸೂಕ್ತವಾಗಿದ್ದು ಅವರ ಆಯ್ಕೆಯಿಂದ ಆ ಸ್ಥಾನದ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅದ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಮಾತನಾಡಿ, ಕಸಾಪ ಕಾರ್ಯಕಾರಿಣಿಯಲ್ಲಿ ಸಮ್ಮೇಳನಾಧ್ಯಕ್ಷತೆ ಸ್ಥಾನಕ್ಕೆ ಪ್ರಸ್ತಾಪವಾದ ಹೆಸರುಗಳ ಪೈಕಿ ಅತ್ಯಂತ ಅರ್ಹತೆ ಹೊಂದಿದ್ದ ಗೋರುಚ ಅವರ ಹೆಸರು ಸರ್ವರಿಂದ ಸರ್ವಾನುಮತದಿಂದ ಅನುಮೋದನೆಗೊಂಡಿತು. ಮೊದಲಿಗೆ ಯಾದಗಿರಿ ಪ್ರತಿನಿಧಿಸಿದ್ದ ತಾವು ಗೋರುಚ ಹೆಸರು ಪ್ರಸ್ತಾಪಿಸಿದ್ದು ಮತ್ತು ಅನುಮೋದನೆಗೊಂಡಿದ್ದು ಯಾದಗಿರಿ ಜಿಲ್ಲೆ ಸಂಭ್ರಮಿಸುವAತಾಗಿದ್ದು ಹೆಮ್ಮೆಯೆನಿಸುವ ಸಂಗತಿ ಎಂದು ನುಡಿದರು. 

ಶರಣ ಸಾಹಿತ್ಯ ಪರಿಷತ್ ಯುವ ಘಟಕದ ರಾಜ್ಯ ಮುಖಂಡ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿ, ಅತ್ಯಂತ ಅರ್ಹರಿಗೆ ಸಮ್ಮೇಳನಾಧ್ಯಕ್ಷತೆ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ.

ವಿನೋಬಾ ಭಾವೆ ಅವರಿಗೆ ಭೂ ದಾನದ ಆಂದೋಲನದ ವೇಳೆ ಭೂಮಿಯ ಬದಲಿಗೆ ತಾವು ಧರಿಸಿದ್ದ ಚಿನ್ನದ ಉಂಗುರ ನೀಡಿದವರು ಗೋರುಚ ಆಗಿದ್ದಾರೆ. ದಾನ ಸ್ವೀಕರಿಸಿದ ಭಾವೆಯವರು ಚಿನ್ನ ಧರಿಸಬಾರದು ಎಂದು ಕೇಳಿದ ಮಾತಿಗೆ ಕಟ್ಟು ಬಿದ್ದು ಅಂದಿನಿAದ ಇಂದಿಗೂ ಚಿನ್ನ ಧಾರಣೆ ತ್ಯಾಗ ಮಾಡಿ ನುಡಿದಂತೆ ನಡೆದ ಸಾಹುಕಾರರಿವರು ಎಂದು ನುಡಿದರು. ಇಂತಹ ಮೇರು ವ್ಯಕ್ತಿತ್ವದ ಗೋರುಚ ಅವರು ಸಮ್ಮೇಳನಾದ್ಯಕ್ಷರಾಗುತ್ತಿದ್ದಂತೆಯೇ ಯಾದಗಿರಿಗೆ ಆಗಮಿಸಿರುವುದು ಸೌಭಾಗ್ಯವಾಗಿದೆ ಎಂದರು. 

ಉಪನ್ಯಾಸಕ ಎಸ್.ಎಸ್ ನಾಯಕ ಅಭಿನಂದನಾ ಮಾತನಾಡಿ, ಗೋ ರುಚ ಅವರ ಸಮಗ್ರ ಜೀವನ,  ಬದುಕು ಬರಹ, ಸಾಮಾಜಿಕ ಸೇವೆಯ ಸಾಧನೆಗಳು ವಿವರಿಸಿ, ಶಸಾಪ, ಕಸಾಪ ಗಳಿಗೆ ಆರ್ಥಿಕ ಸ್ವಾವಲಂಬಿಯಾಗಿ ಬೆಳೆಯಲು ಒಬ್ಬ ಕನ್ನಡಿಗ ಒಂದು ರೂ. ಅಭಿಯಾನ ಮಾಡಿದರು, ದತ್ತು ನಿಧಿಯನ್ನು ಹೆಚ್ಚಿಸಿದರು. ಸಾಲುಸಾಲು ಪ್ರಶಸ್ತಿಗಳು ಪಡೆದಿದ್ದು ಅವರ ಸಾಧನೆಗೆ ಸಾಕ್ಷಿಯಾಗಿದೆ, ತಮಗೆ ಬಂದ ಪ್ರಶಸ್ತಿ ಹಣ ಶರಣ ಸಾಹಿತ್ಯ ಪರಿಷತ್ತಿಗೆ ನೀಡಿದರು ಎಂದು ಸೋದಾಹಣವಾಗಿ ಅವರ ವಿಸ್ತೃತ ಪರಿಚಯವನ್ನು ಮಾಡಿಕೊಟ್ಟರು. 

ಅಭಿನಂದನಾ ಮಾತುಗಳನ್ನು ಹಿರಿಯ ಸಾಹಿತಿ, ಪತ್ರಕರ್ತ, ಸಮಾಜಿಕ ಮುಖಂಡರಾದ ಅಯ್ಯಣ್ಣ ಹುಂಡೇಕಾರ್, ಸಾಹಿತಿ ಗಾಳೆಪ್ಪ ಪೂಜಾರಿ ಆಡಿದರು. ಡಾ. ಭೀಮರಾಯ ಲಿಂಗೇರಿ ಸ್ವಾಗತಿಸಿದರು. ಸಿದ್ದರಾಜರೆಡ್ಡಿ ಕರೆಡ್ಡಿ ನಾಲ್ವಾರ್ ನಿರೂಪಿಸಿ ಕೊನೆಗೆ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಸಾಹಿತಿಗಳು ಸೇರಿದಂತೆ ಅನೇಕರು ಭಾಗಿಯಾಗಿ ಗೋರುಚ ಅವರಿಗೆ ಅಭಿನಂದನೆಗಳ ಮಹಾಪೂರ ಸುರಿಸಿದರು. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು