ಕಲಾ ನಮನ ಟ್ರಸ್ಟ್  ನಿಂದ 79ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂತರ್ಜಾಲ ಕವಿಗೋಷ್ಠಿ

ಯಾದಗಿರಿ: ಸ್ವಾತಂತ್ರೊö್ಯÃತ್ಸವ ಅಂಗವಾಗಿ ಇದೇ 15 ಆಗಸ್ಟ್ 2025, ಸಂಜೆ : 5 ಗಂಟೆಗೆ ಅಂತರ್ಜಾಲ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, 

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಖ್ಯಾತ ವೈದ್ಯರು ಹಾಗೂ ಕವಿಗಳಾದ ಕೊಂಕಲ್ ಮೂಲದ ಡಾ. ಎಸ್. ಎಸ್. ಗುಬ್ಬಿ,  ಸಾಮಾಜಿಕ ಚಿಂತಕ ಬಸವರಾಜ ಪಾಟೀಲ ಕೊದಂಡ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೊಂಕಲ್ ಪ್ರಜ್ಞಾವಂತರ ಬಳಗದ ಅಧ್ಯಕ್ಷ ಪ್ರೊ. ವೆಂಕಣ್ಣ ಡೊಣ್ಣೆಗೌಡರ ವಹಿಸುವರು.

ಕವಿತೆಯ ಕುರಿತು  ಸಾಹಿತಿಗಳಾದ ಡಾ. ಮರಿಯಪ್ಪ ನಾಟೇಕಾರರವರು ಮಾತನಾಡಲಿದ್ದಾರೆ.

ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು:

ಡಾ. ದಾವಲಸಾಬ ನರಗುಂದ, ಮಲ್ಲಮ್ಮ ಯಾಟಗಲ್,ಮೀನಾಕ್ಷಿ ಆರ್. ಹೊಸಮನಿ, ಡಾ. ಕೈಲಾಶ ಡೋಣಿ, ಷರೀಫ್ ಹಸಮಕಲ್, ಡಾ. ಎ. ಎಲ್.ದೇಸಾಯಿ, ಸಿದ್ದಣ್ಣ ಪೂಜಾರಿ, ಚನ್ನಪ್ಪ ಬಾಗಲಿ,ಆನಂದ ಎಸ್. ಗೊಬ್ಬಿ, ಪ್ರಿಯಾಂಕ ಮಾವಿನಕರ್, ದೇವೇಂದ್ರ ಹುಲಕಲ್(ಜೆ), ಶ್ರೀನಿವಾಸ ಮಡಿವಾಳ ಕೊಂಕಲ್, ಮಲ್ಲಿಕಾರ್ಜುನ ಕಾವಲಿ, ಬಿ. ಎನ್. ದೊಡ್ಡಮನಿ, ವೀರೇಶ ಕೊಂಕಲ್, ಈಶ್ವರ ನಾಟೇಕಾರ, ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಸ್ವರ ಸಂವಾದಿನಿ ಸಂಗೀತ ಶಾಲೆ ಧಾರವಾಡ ಮಕ್ಕಳಿಂದ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರು ಡಾ. ಬಸವರಾಜ ಎಸ್. ಕಲೆಗಾರರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ ಕಲೆಗಾರ ಇವರ ಜಂಗಮ ದೂರವಾಣಿ ಸಂಖ್ಯೆ: 9980780144 ಸಂಪರ್ಕಿಸಬಹುದು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು