ರಾಜ್ಯಮಟ್ಟದ ಟೆನಿಸ್ ನಲ್ಲಿ ಯಾದಗಿರಿಯ ಮಲ್ಲಿಕಾರ್ಜುನ ಯಾದವ್ ರಾಜ್ಯಕ್ಕೆ ಪ್ರಥಮ, ಡಬ್ಬಲ್ಸ್ ನಲ್ಲಿ ಸೆಮಿಸ್ ಸಾಧನೆ

ಯಾದಗಿರಿ ಟೈಮ್ಸ್ ವಾರ್ತೆ | 17.12.24

ಯಾದಗಿರಿ: ದಾವಣಗೆರೆಯಲ್ಲಿ ಜರುಗಿದ ಕರ್ನಾಟಕದ ರಾಜ್ಯ ಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿಯಲ್ಲಿ ಯಾದಗಿರಿಯ ಮಲ್ಲಿಕಾರ್ಜುನ್ ಯಾದವ್ 35+ ವರ್ಷದ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಟ್ರೊಫಿ ತಮ್ಮದಾಗಿಸಿಕೊಂಡಿದ್ದಾರೆ. 

ಡಿಸೆಂಬರ್ 13-15 ರಂದು ಎರಡು ದಿನಗಳ ಕಾಲ ಜರುಗಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಯಾದಗಿರಿಗೆ ಕೀರ್ತಿ ತಂದಿದ್ದಾರೆ. 

ಇದಲ್ಲದೇ ಡಬ್ಬಲ್ಸ್ ಪಂದ್ಯಾವಳಿಯಲ್ಲಿ ಜಗದೀಶ್ ಹೆಂದೆ ಹಾಗೂ ಮಲ್ಲಿಕಾರ್ಜುನ್ ಯಾದವ್ ಅವರು 35 + ವಯೋಮಾನದವರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಮಟ್ಟಕ್ಕೇರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಹರ್ಷ: ರಾಜ್ಯದ ವಿವಿಧೆಡೆಯಿಂದ ಸುಮಾರು 400ಕ್ಕೂ ಮಿಕ್ಕಿ ಆಟಗಾರರು ಭಾಗವಹಿಸಿದ್ದ ಮಹತ್ವದ ಪಂದ್ಯಾವಳಿಯಲ್ಲಿ ಯಾದಗಿರಿಗೆ ಪದಕ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಉಭಯ ಆಟಗಾರರ ಸಾಧನೆಗೆ ಯಾದಗಿರಿ ಟೆನ್ನಿಸ್ ಕ್ಲಬ್ ಪರವಾಗಿ ಡಾ. ಪ್ರದೀಪರಡ್ಡಿ ಹರ್ಷ ವ್ಯಕ್ತಪಡಿಸಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು