ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯಿಂದ ನ. 14      ರಂದು ಯರಗೋಳದಲ್ಲಿ ಭವ್ಯ ರಾಜ್ಯೋತ್ಸವ ಸಮಾರಂಭ

ಯಾದಗಿರಿ ಟೈಮ್ಸ್ ವಾರ್ತೆ

13.11.24

ಯಾದಗಿರಿ: ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ಯರಗೋಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯರಗೋಳ ಕನ್ನಡಿಗರ ವೈಭವ ಸಮಾರಂಭ ತಾಲ್ಲೂಕಿನ ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇದೇ ನವೆಂಬರ್ 14 ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ತಾಪೂರದ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಪರಮಪೂಜ್ಯ ಷ.ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ವಹಿಸಲಿದ್ದಾರೆ. ಸಮ್ಮುಖವನ್ನು ಬೆಂಗಳೂರಿನ ಶ್ರೀಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷರಾದ ಬ್ರಹ್ಮಚಾರಿ ಆತ್ಮಾನಿರತಾಮೃತ ಚೈತನ್ಯ, ಯರಗೋಳ ಗವಿಸಿದ್ದಲಿಂಗೇಶ್ವರ ವಿರಕ್ತಮಠದ ಶ್ರೀ ಪರಮಪೂಜ್ಯ ಸಂಗಮೇಶ್ವರ ದೇವರು ಆಗಮಿಸುವರು.

ಅಧ್ಯಕ್ಷತೆಯನ್ನು ಸೇವಾ ಸಮಿತಿ ಅದ್ಯಕ್ಷರಾದ ಶಿವರಾಜ ಮಾನೇಗಾರ ವಹಿಸುವರು, ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಉತ್ತರಾದೇವಿ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಗುರುಮಕಲ್ ಶಾಸಕ ಶರಣಗೌಡ ಕಂದಕೂರು, ಕೆಪಿಸಿಸಿ ಸದಸ್ಯ ಶರಣಪ್ಪ ಡಿ. ಮಾನೇಗಾರ, ಇಬ್ರಾಹಿಂಪುರದ ಶ್ರೀಸಾಯಿ ಮಂದಿರದ ಅಧ್ಯಕ್ಷ ಮಹಾರಾಜ ದಿಗ್ಗಿ, ಗ್ರಾಪಂ ಅದ್ಯಕ್ಷ ರಾಮಲಿಂಗಪ್ಪ ಅಲ್ಲಿಪೂರ, ಗ್ಯಾರೆಂಟಿ ಅಧ್ಯಕ್ಷ ಬಸವರಾಜಪ್ಪ ಬಾಗ್ಲಿ, ನೈರುತ್ಯ ರೈಲ್ವೆ ಸಲಹಾ ಸಮಿತಿ ಅಧ್ಯಕ್ಷ ಹಣಮಂತ ಮಡ್ಡಿ, ಜಿಲ್ಲಾ ಕಸಾಪ ಅದ್ಯಕ್ಷ ಸಿದ್ದಪ್ಪ ಹೊಟ್ಟಿ

ಯಿಮ್ಸ್ ಆರ್ಥಿಕ ಸಲಹೆಗಾರ ಕಾಶಿನಾಥ ಡಿ. ಅಲ್ಲೂರು, ಗ್ರಾಮೀಣ ಠಾಣೆ ಪಿ.ಎಸ್.ಐ. ಹಣಮಂತ ಬಂಕಲಗಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ| ಹಣಮಂತರಡ್ಡಿ, ಕರವೇ ಅದ್ಯಕ್ಷ ಸಿದ್ದುರಡ್ಡಿ ತಂಗಡಗಿ, ಕರವೇ ಗೌರವಾದ್ಯಕ್ಷ ರುದ್ರ ತುಮಕೂರ, ಕಲಿಕೆ ಕಾರ್ಯಕ್ರಮಾಧಿಕಾರಿ ವಿ. ಶ್ರೀಕಾಂತ, ಯರಗೋಳ ಪಿಡಿಓ ಕಲ್ಯಾಣಕುಮಾರ, ಪ್ರೌಢಶಾಲೆ ಮುಖ್ಯಗುರು ಚಂದ್ರಪ್ಪ ಗುಂಜನೂರ, 

ವಿಶೇಷ ಆಹ್ವಾನಿತರಾಗಿ ಹಾವೇರಿಯ ಬಾಲ ಪ್ರತಿಭೆ ಕುಮಾರಿ ಅನುಷಾ ಹಿರೇಮಠ, ತುಮಕೂರಿನ ಮಳೆಬಿಲ್ಲು ಸಾಹಿತಿ ಶ್ರೀಮತಿ ಜಿ. ಲೀಲಾ ಗುರುರಾಜ, ಕಲ್ಬುರ್ಗಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರಂಗಭೂಮಿ ಕಲಾವಿದೆ ಶ್ರೀಮತಿ ನೀಲಾ ಅಶ್ವಥ್ಥ ನಾರಾಯಣ, ಶಾಂತರಾಜು ಮೇದಾರ, 

ಅತಿಥಿಗಳಾಗಿ ಯರಗೋಳ ಪಿಎಚ್.ಸಿಯ ವೈದ್ಯಾಧಿಕಾರಿ ಡಾ|| ಜಗದೀಶ ಪಾಟೀಲ್, ಶಂಕ್ರಪ್ಪ ಕದರಾಪುರ, ಚನ್ನಬಸಪ್ಪ ಗೋಡಿಕಾರ, ಮಂಜುನಾಥ, ಚಂದ್ರಪ್ಪ ಇದ್ಲಿ, ಆಶಪ್ಪ ಗಾಜರಕೋಟ, ಸಿದ್ದು ಪೂಜಾರಿ ವಾಡಿ, ಸುಶೀಲಮ್ಮ, ಸಲಾಲ್ ಅಹ್ಮದ್ ಪಾಟಕ, ಚನ್ನಬಸಪ್ಪ ಜೋಗಿ, ರೇಣುಕಾ ಎಂ. ಮಾನೆಗಾರ ಆಗಮಿಸುವರು

ಇದೇ ಸಂದರ್ಭದಲ್ಲಿ ಯರಗೋಳ ಗ್ರಾಮೀಣ ಪ್ರದೇಶದ ಐವರು ಸಾಧಕರಾದ ಶಿವಪ್ಪ ಚಿಮಟಗಿ (ಕೃಷಿ), ಮೈನಾಬಾಯಿ ಕಂಚಗಾರ (ಜಾನಪದ), ಚಂದ್ರಕಾAತ ಜೋಗಿ (ಶಿಕ್ಷಣ), ಚಂದ್ರಪ್ಪ ಗುಳೇದ (ಸಮಾಜಸೇವೆ), ಚನ್ನಬಸಪ್ಪ ಸುಬೇದಾರ (ಗ್ರಾಮೀಣ ಕ್ರೀಡಾ) ಸನ್ಮಾನಿಸಿ ಗೌರವಿಸಲು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದ ವೃತ್ತದಲ್ಲಿರುವ ತಾಯಿ ಭುವನೇಶ್ವರಿ ಮೂರ್ತಿಗೆ ಬೆಳಗ್ಗೆ 8 ಕ್ಕೆ ಅಭಿಷೇಕ, ಮದ್ಹಾಹ್ನ 2ಕ್ಕೆ ಭುವನೇಶ್ವರಿ ತಾಯಿ ಭಾವಚಿತ್ರ ಮೆರವಣಿಗೆ ಕಲಾ ತಂಡಗಳಾದ ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ. ಮತ್ತು 51 ಮೀಟರ್ ಉದ್ದದ ಕನ್ನಡ ನಾಡ ಧ್ವಜ ಮೆರವಣಿಗೆಯೊಂದಿಗೆ ಶಾಲಾ ಕಾಲೇಜು ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆಡೆಯಲಿದೆ ಎಂದು ಶಿವರಾಜ ಮಾನೇಗಾರ ತಿಳಿಸಿದ್ದು ಗ್ರಾಮದ, ತಾಲ್ಲೂಕಿನ ಜಿಲ್ಲೆಯ ಸಮಸ್ತ ಕನ್ನಡ ಪ್ರೇಮಿಗಳು ಭಾಗಿಯಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು