ತಿಳಿದು ಭಕ್ತಿಯ ಮಾಡಬೇಕು ಎಂದು ಪವಾಡಗಳ ಮೂಲಕ ಜಾಗೃತಿ ಮೂಡಿಸಿದ್ದರು ವಿಶ್ವಾರಾಧ್ಯರು: ಪಂ. ಬಸವರಾಜ ಶಾಸ್ತಿç ಎಲೆಕೂಡ್ಲಿಗಿ

ಯಾದಗಿರಿ ಟೈಮ್ಸ್ ವಾರ್ತೆ |  13.11.24

ಯಾದಗಿರಿ: ಅಸಮಂಜಸ ಆ
ಚಾರ ಬೇಡ, ದೇವರ ಮುಂದೆ ಸಕ್ಕರೆ, ತುಪ್ಪ, ಹಾಲು ಹಾಕಿ ಗಲಿಜು ಮಾಡಬೇಡಿ ತಿಳಿದು ಆಚರಣೆ ಮಾಡಬೇಕು ವಿಚಾರವಿಲ್ಲದ ಆಚಾರ ಸರಿಯಲ್ಲ ಎಂಬ ವಿಚಾರಗಳನ್ನು ವಿಶ್ವಾರಾಧ್ಯರು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ತಮ್ಮ ಪವಾಡಗಳ ಮೂಲಕ ಮಾಡಿದರು ಎಂದು ಪ್ರವಚನಕಾರ ವೇ||ಮೂ|| ಬಸವರಾಜ ಶಾಸ್ತಿç ಎಲೆಕೂಡ್ಲಿಗಿ, ಶಹಾಪೂರ ಹೇಳಿದರು.

ಇಲ್ಲಿನ ಲಕ್ಷಿö್ಮÃನಗರದ ಶ್ರೀ ಲಕ್ಷಿö್ಮÃ ಮಾರುತಿ ದೇವಸ್ಥಾನ ಆವರಣದಲ್ಲಿ ಗೌರಿಹುಣ್ಣಿಮೆ ಅಂಗವಾಗಿ ನಡೆಯುತ್ತಿರುವ ಶ್ರೀವಿಶ್ವಾರಾಧ್ಯ ಪುರಾಣ ಪ್ರವಚನ ಕಾರ್ಯ ನೆಡೆಸಿಕೊಟ್ಟು ಮಾತನಾಡಿದ ಅವರು, ಘನಪಂಡಿತ ವಿಶ್ವಾರಾಧ್ಯರು ಅಣಿಮಾದಿ ಅಷ್ಟ ಸಿದ್ದಿಗಳನ್ನು ಪಡೆದ ಮಹಾತ್ಮರಾಗಿದ್ದರು.

ಅಣಿಮಾದಿ ಅಷ್ಟಸಿದ್ದಿಗಳನ್ನು ತ್ರೇತಾಯುಗದಲ್ಲಿದ್ದ ಆಂಜನೇಯ ಸ್ವಾಮಿ ಹೊಂದಿದ್ದAತಹ ವಿಶೇಷ ಜ್ಞಾನವನ್ನು ವಿಶ್ವಾರಾಧ್ಯರು ಹೊಂದಿದ್ದರು ಎಂದು ನುಡಿದರು. 

ವಿಶ್ವಾರಾಧ್ಯರು ತಮ್ಮ ಜೀವಿತಾವಧಿಯುದ್ದಕ್ಕೂ ಅನೇಕ ಲೀಲೆಗಳು, ಪವಾಡಗಳಿಂದ ಜನರನ್ನು ಉದ್ಧರಿಸಿ ಅವರ ಬೇಕು ಬೇಡ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ ನಡೆದಾಡಿದ ದೇವರಾಗಿ ಅಪಾರ ಲೀಲೆ ತೋರಿದರು ಎಂದು ವಿವರಿಸಿದರು. 

ಉಣ್ಣದ ಲಿಂಗಕ್ಕೆ ಬೊನವ ಹಿಡಿಯಬೇಡಿ ಉಣ್ಣುವ ಜಂಗಮಕ್ಕೆ ಅನ್ನ ನೀಡಿ ಎಂಬುದನ್ನು ಅರಿತು ಆಚರಿಸಬೇಕು ಆದರೆ ಇಂದು ಬಹುತೇಕರು ದೇವಸ್ಥಾನಕ್ಕೆ, ಮಠ ಮಾನ್ಯಗಳಿಗೆ ಹೋಗಿ ದೇವರ ಮುಂದೆ ಸಕ್ಕರೆ, ಕಲ್ಲುಸಕ್ಕರೆ, ಆಹಾರ ಪದಾರ್ಥಗಳನ್ನು ಇಟ್ಟು ಪವಿತ್ರ ದೇಗುಲವನ್ನು ಅಪವಿತ್ರ ಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಮೌಢ್ಯವನ್ನು ಭಕ್ತಾದಿಗಳು ಮಾಡಬಾರದು ಎಂದು ತಿಳಿಸಿದರು

ವಿಶ್ವಾರಾಧ್ಯರು ತಮ್ಮ ಕಾಲಕ್ಕೆ ಉಟಕನೂರು, ಅಂಕಲಿಮಠದ ನಿರುಪಾದೆಪ್ಪ ಹಾಗೂ ಯಲಗೋಡದ ಅವಧೂತ ಪರಂಪರೆಯ ಮೂವರಿಗೆ ಶಿವ ದೀಕ್ಷೆ ನೀಡಿದರು ಅವರ ಪರಂಪರೆ ಇಂದಿಗೂ ಮೂರು ಸ್ಥಳಗಳಲ್ಲಿ ನಿÀರಂತರವಾಗಿ ಮುಂದುವರೆದುಕೊAಡು ಹೋಗುತ್ತಿದೆ ಎಂದೂ ವಿವರಿಸಿದರು. 

ಹೀಗೆ ಮಹಾತ್ಮರ ಜೀವನ ಚರಿತ್ರೆ, ಪುರಾಣ ಪಾರಾಯಣ, ಶ್ರವಣದಿಂದ ಬದುಕು ಪಾವನವಾಗುತ್ತದೆ ಎಂದು ಅವರು ನುಡಿದರು.

ಪ್ರಭುಕುಮಾರ ಗವಾಇಗಳು ಮದರಿ ಸಂಗೀತ ಸೇವೆ ನೀಡಿದರು, ಲಕ್ಷö್ಮಣ ಹೇರೂರು ತಬಲಾ ಸಾಥಿ ನೀಡಿದರು. ದಿನದ ದಾಸೋಹವನ್ನು ಆಶಿರ್ವಾದ ಆಸ್ಪತ್ರೆಯ ಡಾ| ಸಿ.ಎಂ. ಪಾಟೀಲ್ ವ್ಯವಸ್ಥೆಗೊಳಿಸಿದ್ದರು. ಪ್ರವಚನ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭೇ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೊಸಂಬಿ, ತಾಲ್ಲೂಕು ಅದ್ಯಕ್ಷ ರಾಜೂಗೌಡ ಚಾಮನಳ್ಳಿ, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು