ತೆರಿಗೆ ಪಾವತಿಸಿ ವಿನಾಯತಿ ಪಡೆಯಿರಿ: ಲಲಿತಾ
ಏ.30ರೊಳಗಾಗಿ ತೆರಿಗೆ ಕಟ್ಟಿ, ಶೇ5 ರಷ್ಟು ರಿಯಾಯಿತಿ ಪಡೆಯರಿ: ಅಧ್ಯಕ್ಷೆ ಲಲಿತಾ ಅನಪುರ
ಯಾದಗಿರಿ: ಬರುವ ಏ.30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ನಗರದ ಆಸ್ತಿಗಳ ಮಾಲಿಕರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದೆಂದು
ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ್ ಹೇಳಿದರು.
ನಗರಸಭೆ ಆವರಣದಲ್ಲಿ ಈ ಕುರಿತು ಮಂಗಳವಾರ ಅಭಿಮಾಯನಕ್ಕೆ ಅಧ್ಯಕ್ಷರು,ಪೌರಾಯುಕ್ತರು, ಸದಸ್ಯರು ಮುನ್ನಡಿ ಬರೆದರು.
ನಗರದ ಅಭಿವೃದ್ಧಿಗೆ ಸಾರ್ವಜನಿಕರು ಕೈಜೊಡಿಸಬೇಕು, ಅಂದಾಗಲೇ ಎಲ್ಲವೂ ಸಾಧ್ಯವೆಂದು ಅಧ್ಯಕ್ಷರು ಹೇಳಿದರು.
ಈಗಾಗಲೇ ವಿವಿಧ ರೀತಿಯಿಂದ ಜನರಲ್ಲಿ ಮನವರಿಕೆ ಮಾಡಲಾಗಿದ್ದು, ಕೂಡಲೇ ತೆರಿಗೆ ಕಟ್ಟುವತ್ತ ಜನರು ಮನಸ್ಸು ಮಾಡಬೇಕೆಂದರು.
ನಗರಸಭೆ ಆಯುಕ್ತ ರಾದ ಉಮೇಶ ಚವ್ಹಾಣ ಮಾತನಾಡಿ,
ನಗರದ ಅಭಿವೃದ್ಧಿಗೆ ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದೆವೆ. ಈಗ ಜನರು ತೆರಿಗೆ ಕಟ್ಟಿದರೇ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುನಾಥ ದಾಸನಕೇರಿ, ಕಛೇರಿ ವ್ಯವಸ್ಥಾಕರಾದ ಅಶ್ವನಿ ಚವ್ಹಾಣ, ಕಂದಾಯ ಅಧಿಕಾರಿ ಜಗದೇವಿ, ಕಂದಾಯ ನಿರಿಕ್ಷಕರಾದ ಮಾನಪ್ಪ, ಕರ ವಸುಲಿಗಾರರಾದ ನರಸಪ್ಪ, ಬೋಜಲಿಂಗ್, ಕಂಪ್ಯೂಟರ್ ಅಪರೇಟರ್ ಅಶೋಕ ಯಾದವ್ ಸೇರಿದಂತೆ ಕಛೇರಿ ಸಿಬ್ಬಂದಿಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ