ಹೈ,ಸುಪ್ರೀಂ ಆದೇಶಗಳ ಉಲ್ಲಂಘನೆ ಮಾಡುತ್ತಿರುವ ಆಡಳಿತಗಳು
ವಕ್ಫ್ ಮಂಡಳಿಯಿAದ ಜಿಲ್ಲೆಯ 1440 ರೈತರ ಆಸ್ತಿಗಳು ಸ್ವಾಹ ಮತಬ್ಯಾಂಕ್ ರಾಜಕೀಯ ಆಡಂಬೋಲಗಳಾದ ಅಧಿಕಾರಿಗಳು
ಮಂಡಳಿ ಹೆಸರಿನಲ್ಲಿ ರೈತರ ಜಮೀನಿಗೂ ಬಾಯಿ ಹಾಕುತ್ತಿರುವ ವಕ್ಫಾಸುರ ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಬೀದಿಗೆ ಬರುವನೇ ಅನ್ನದಾತ?
ಯಾದಗಿರಿ ಟೈಮ್ಸ್ ವಿಶೇಷ
(ವೈಜನಾಥ ಹಿರೇಮಠ)
ಯಾದಗಿರಿ: ದೇಶಾದ್ಯಂತ ವಿದಾನಸೌಧ, ಹೊಸ ಪಾರ್ಲಿಮೆಂಟ್ ಭವನ ಸೇರಿದಂತೆ ಸಾವಿರಾರು ಆಸ್ತಿಗಳೆಲ್ಲವೂ ತನ್ನದೆಂದು ಪ್ರತಿಪಾದಿಸುತ್ತಿರುವ ಮಂಡಳಿ ಹೆಸರಿನಲ್ಲಿ ವಕ್ಫಾಸುರ ಈದೀಗ ರೈತರ ಜಮೀನಿಗೂ ಬಾಯಿ ಹಾಕಿದ್ದು, ದೇಶದಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯದ ಸಂಘರ್ಷ ಏರ್ಪಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ವಕ್ಫಾಸುರ ತನ್ನ ಕಬಂಧ ಬಾಹುಗಳನ್ನು ಈದೀಗ ರೈತರ ಜಮೀನಿನ ಕಡೆ ಚಾಚುತ್ತಿರುವುದು ಸ್ಪಷ್ಟವಾಗಿದೆ.
ಮತಬ್ಯಾಂಕ್ ರಾಜಕೀಯದವರ ಆಡಂಬೋಲಗಳಾಗಿರುವ ಅಧಿಕಾರಿಗಳಿಂದ ಇಂತಹ ಕೃತ್ಯಗಳು ನಡೆದು ತಾರಕಕ್ಕೇರುತ್ತಿವೆ ಎಂದು ರೈತ ಸಂಘಟನೆ ಆರೋಪಿಸುತ್ತಿದೆ.
ಇದಕ್ಕೊಂದು ತಾಜಾ ಉದಾಹರಣೆ ಎಂಬAತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಒಕ್ಫ್ ಮಂಡಳಿಯು 1440 ಆಸ್ತಿಗಳಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಕಲಂ ನಂಬರ್ 11 ರಲ್ಲಿ ನಮೂದಿಸಿ ಸುಪ್ರಿಂಕೋರ್ಟ್ ಹಾಗೂ ಕಲ್ಬುರ್ಗಿ ವಿಭಾಗೀಯ ಹೈಕೋರ್ಟ ಪೀಠಗಳ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಅಧಿಕಾರಿಗಳು ನಡೆದುಕೊಂಡು ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ
ರೈತರ ಹೊಲಗಳ ಪಹಾಣಿ ಪತ್ರಿಕೆಯಲ್ಲಿ ಕಲಂ ನಂ. 11 ರಲ್ಲಿ ಬಂದಿರುವ ವಕ್ಫ್ ಬೋರ್ಡ್ ಎಂದು ನಮೂದಾಗಿರುವುದರಿಂದ ರೈತರಿಗೆ ಯವುದೇ ರೀತಿಯ ಸಾಲಸೌಲಭ್ಯಗಳು ಸರ್ಕಾರದ ಸೌಲತ್ತುಗಳು ಹಾಗೂ ರೈತರು ತಮ್ಮ ಕಟ್ಟುನಿಟ್ಟಿಗಾಗಿ ಜಮೀನು ಮಾರಾಟ ಮಾಡುವುದಾಗಲಿ ಮಾರಾಟ ಮಾಡುವುದಕ್ಕೆ ತಡೆ ಇರುವುದರಿಂದ ರೈತ ಸಂಕಷ್ಟಕ್ಕೆ ಈಡಾಗಿರುತ್ತಾನೆ.
ಅದೇ ರೀತಿ ಯಾದಗಿರಿ ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಗದಗ ವಾಡಿ ರೈಲು ಯೋಜನೆಗೆ ಸುಮಾರು ಎಕರೆಗಳಷ್ಟು ಜಮೀನು ರೈಲ್ವೆ ಇಲಾಖೆಯವರು ಸ್ವಾಧೀನ ಪಡಿಸಿಕೊಂಡಿರುವುದು ಅದರಲ್ಲಿಯೂ ಕೂಡ ವಕ್ಫ್ ಬೋರ್ಡ್ ಆಸ್ತಿ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಪತ್ರ ಬರೆದು ಪರಿಹಾರದ ಹಣ ವಿತರಣೆಗೆ ತಡೆಯೊಡ್ಡಿರುತ್ತಾರೆ. (ವಕ್ಫ್ ಮಂಡಳಿ ಪತ್ರ ಸಂಖ್ಯೆ: ಡಿಡಬ್ಲೂಓ/ಎಲ್‌ಎಸಿ/01/ವೈಡಿಜಿ/2023-24/123 ದಿ: 17-07-2023), ಇದೇ ರೀತಿ ಸೂರತ್ ಚೆನ್ನೆöÊ ಭಾರತ ಮಾಲಾ ಯೋಜನೆ ರಾಷ್ಟಿçÃಯ ಹೆದ್ದಾರಿ ಕಾಮಗಾರಿಯ ವೇಳೆಯ ಭೂಸ್ವಾಧೀನಗೊಂಡ ಜಮೀನಿಗೆ ಪ್ರತಿಯಾಗಿ ರೈತರಿಗೆ ಸರ್ಕಾರ ನೀಡುವÀ ಪರಿಹಾರವನ್ನು ಕೊಡದಂತೆ ತಡೆಯೊಡ್ಡಿರುತ್ತಾರೆ.
ಇದಲ್ಲದೇ ಕಡೇಚೂರು ಬಾಡಿಯಾಲ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಮಾಡಿಕೊಂಡ ರೈತರ ಜಮೀನುಗಳಿಗೂ ಪರಿಹಾರ ಕೊಡದಂತೆ ತಡೆಯೊಡ್ಡಿರುತ್ತಾರೆ.
ಈ ಎಲ್ಲ ಸಂದರ್ಭಗಳಲ್ಲಿ ವಕ್ಫ್ ಮಂಡಳಿಯಿAದ ರೈತನಿಗೆ ಸಂಕಷ್ಟ ತಂದೊಡ್ಡಿದ್ದು, ವಕ್ಫ್ ಬೋರ್ಡ್ನಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು 2013 ರಲ್ಲಿ ಹೈಕೋರ್ಟ್ಗೆ ಸಲ್ಲಿಕೆಯಾದ ಸಿವಿಲ್ ರಿವಿಜನ್ ಪಿಟಿಷನ್ ನಂ. 2018 ದಿ: 5-12-2013 ಈ ಪ್ರಕರಣದಲ್ಲಿ ಮಾನ್ಯ ಹೈಕೋರ್ಟ್ ಆದೇಶ ಮಾಡಿದ್ದು, ಯಾವದೇ ರೈತರ ಆಸ್ತಿಯೂ ಭೂನ್ಯಾಯ ಮಂಡಳಿಗೆ ಒಳಪಟ್ಟ ಆಸ್ತಿಯು ವಕ್ಫ್ ಮಂಡಳಿಗೆ ಸಂಬAಧಪಡುವುದಿಲ್ಲ ಎಂದು ಆದೇಶ ಮಾಡಿರುತ್ತದೆ.
ಕಲ್ಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದಾಖಲಾದ ರಿಟ್ ಪಿಟಿಷನ್ ನಂ: 202181 -2024, ರಿಟ್ ಪಿಟಿಷನ್ ನಂ: 202183 -2024, ರಿಟ್ ಪಿಟಿಷನ್ ನಂ: 202109 -2024, ರಿಟ್ ಪಿಟಿಷನ್ ನಂ: 202183 -2024, ರಿಟ್ ಪಿಟಿಷನ್ ನಂ: 202909 -2024, ರಿಟ್ ಪಿಟಿಷನ್ ನಂ: 202783 -2024 ಕೇಸುಗಳನ್ನು ಇತ್ಯರ್ಥ ಪಡಿಸಿದ ಕಲ್ಬುರ್ಗಿ ಪೀಠ ಸದ್ರಿ ಆಸ್ತಿಗಳು ವಕ್ಫ್ ಬೋರ್ಡಗೆ ಸಂಬAಧವಿಲ್ಲ ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ ಅಲ್ಲದೇ ಪಹಾಣಿ ಪತ್ರಿಕೆಯಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂಬ ಹೆಸರನ್ನು ತೆಗೆದುಹಾಕುಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶ ಸಿವಿಲ್ ಅಪೀಲ್ ನಂ: 2788/2022 ದಿ:29-04-2022 ರ ವಕ್ಫ್ ಬೋರ್ಡ್ ರಾಜಸ್ತಾನ ವಿರುದ್ಧ ಜಿಂದಾಲ್ ಸಾ ಲಿ. ಮತ್ತು ಇತರರು ಪ್ರಕರಣದಲ್ಲಿ ಧಾರ್ಮಿಕವಾಗಿರುವ ಕಟ್ಟಡದ ಜಮೀನು ಮಾತ್ರ ವಕ್ಫ್ ಆಸ್ತಿಗೆ ಸ್ವಾಧೀನವಾಗಿದ್ದು ಸಂಪೂರ್ಣ ಜಮೀನಿಗೆ ಸ್ವಾಧೀನ ಮಾಲೀಕರಾಗಿರುವುದಿಲ್ಲವೆಂದು ಸ್ಪಷ್ಟವಾಗಿ ಆದೇಶಿಸಿರುತ್ತಾರೆ.
ಅದೇ ರೀತಿ ಮುಸ್ಲಿಂ ಜನಾಂಗದವರಿಗೆ ಅಂತಿಮ ಸಂಸ್ಕಾರಕ್ಕಾಗಿ ಖಬ್ರಸ್ತಾನ ಇರುವುದೇ ಹೊರತು ವಕ್ಫ್ ಆಸ್ತಿಗೆ ಸಂಬAಧಿಸಿರುವ ಬಗ್ಗೆ ದಾಖಲೆಗಳಲ್ಲಿ ಎಲ್ಲಿಯೂ ನಮೂದಾಗಿರುವುದಾಗಲಿ ಅಥವಾ ಯಾವುದೇ ವ್ಯಕ್ತಿಯು ದಾನವಾಗಿ / ಬಿಟ್ಟುಕೊಟ್ಟಿರುವುದಾಗಿ ಕಂಡುಬAದಿರುವುದಿಲ್ಲ. ಎಂದಿರುವ ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶ ಸಿವಿಲ್ ಅಪೀಲ್ ನಂ: 10770/2016 ದಿನಾಂಕ: 07-02-2022 ಸ್ಟೇಟ್ ಆಫ್ ಆಂದ್ರ ಪ್ರದೇಶ (ನ್ಯೂ ಸ್ಟೇಟ್ ಆಫ್ ತೆಲಂಗಾಣ) ವರ್ಸಸ್ ಎ.ಪಿ. ಸ್ಟೇಟ್ ವಕ್ಫ್ ಬೋರ್ಡ್ ಮತ್ತು ಅರ‍್ಸ್ ರಲ್ಲಿ ವಕ್ಫ್ ಆಸ್ತಿಗೆ ಸಂಬAಧಿಸಿದ ವಿವಾದಿತ ಜಮೀನಿನ ಕುರಿತು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಆದೇಶಿಸಿದೆ.
ಹೀಗಿದ್ದಾಗ್ಯೂ ಜಿಲ್ಲೆಯಲ್ಲಿನ ರೈತರ ಜಮೀನುಗಳ ಪಹಾಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಪ್ರಕರಣಗಳನ್ನು ಕೂಲಂಕಶ ಪರಿಶೀಲನೆ ನಡೆಸದೇ ಮೊಘಲರ ಆಳ್ವಿಕೆಯಲ್ಲಿ ನಡೆಯುತ್ತಿದ್ದ ದಬ್ಬಾಳಿಕೆ ಮಾದರಿಯಲ್ಲಿ ಈ ಜಮೀನುಗಳ ಪರಭಾರೆ ಕುರಿತು ಜಿಲ್ಲಾಡಳಿತ ವಕ್ಫ್ ಸಚಿವರ ಮೌಖಿಕ ಸೂಚನೆಯ ಮೆರೆಗೆ ಕೆಲಸ ಮಾಡುತ್ತಿರುವುದು ನಡೆದಿದೆ ಎಂಬುದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಆರೋಪಿಸುತ್ತಿದ್ದಾರೆ.
ಇಂತಹ ಹುನ್ನಾರಗಳ ವಿರುದ್ಧ ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಬುದ್ದಿಜೀವಿಗಳು ಎಚ್ಚೆತ್ತು ಹಾಸಿಗೆಯಿಂದ ಎದ್ದು ಹೋರಾಟ ಸಂಘಟಿಸಬೇಕಾದ ಅಗತ್ಯವಿಗ ಬಂದಿದೆ.
ರೈತರ 3 ಕಾಯ್ದೆಗಳ ವಿರುದ್ಧ ಹೋರಾಟ ಮಾಡಿದವರು ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತವಿಷಯವಾಗುತ್ತಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕೆಂದರೆ ಕೇಂದ್ರ ಸರ್ಕಾರ ವಕ್ಫ್ ಆಸ್ತಿಗೆ ತಿದ್ದುಪಡಿ ತಕ್ಷಣವೇ ತರುವುದು ಅಗತ್ಯವಾಗಿದೆ ಎಂಬುದು ಕೆಲವು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ