ವಕ್ಫ್ ಆಸ್ತಿಗಳ ಪರಭಾರೆ: ಆದೇಶ ಹಿಂಪಡೆಯಲು ಡಿಸಿಗೆ ಲಕ್ಷಿö್ಮÃಕಾಂತ ಮದ್ದರಕಿ ಆಗ್ರಹ
ಯಾದಗಿರಿ: ಜಿಲ್ಲಾಧಿಕಾರಿಗಳು ಪಹಾಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಭೂಮಿಗಳನ್ನು ವಕ್ಫ್ ಗೆ ನೀಡುವಂತೆ ತಹಸೀಲ್ದಾರುಗಳಿಗೆ ಮಾಡಿದ ಆದೇಶ ಹಿಂಪಡೆಯುವAತೆ ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಲಕ್ಷಿö್ಮÃಕಾಂತ ಎ. ಪಾಟೀಲ್ ಮದ್ದರಕಿ ಮಾತನಾಡಿ, ಯಾದಗಿರಿ ಡಿಸಿಯವರು ಕಳೆದ ತಿಂಗಳು, ದಿ: 05-09-2024 ರಂದು ಹೊರಿಡಿಸಿದ ಆದೇಶ (ಸಂಖ್ಯೆ: ಸಂ/ಕA/ಭೂಮಿ/18/2024-25) ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿ ಇರುವ ಪಹಾಣಿಗಳ ಪ್ರಕಾರ ಪರಭಾರೆ ಮಾಡಬಾರದೆಂದು ಆದೇಶ ಮಾಡಿರುವುದು ಸರಿಯಲ್ಲ. ಇದು ಸುಪ್ರೀಂ ಹಾಗೂ ಹೈಕೋರ್ಟ್ ಆದೇಶಗಳಿಗೆ ಅಪಚಾರ ವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಆದೇಶ ಹಿಂಪಡೆಯುವAತೆ ಆಗ್ರಹಿಸಿದ್ದಾರೆ.
ಮತ್ತು ಇದನ್ನು ಧಾರ್ಮಿಕ ಕಟ್ಟಡಗಳು ಇರುವಂತಹ ಸ್ಥಳಗಳನ್ನು ಸರ್ವೇ ಮಾಡಬೇಕು ಮತ್ತು ಕಟ್ಟಡಗಳಿಗೆ ಸೀಮಿತಗೊಳಿಸಿ ಆದೇಶವನ್ನು ಮಾರ್ಪಾಡು ಮಾಡಬೇಕು ಮತ್ತು ಹಾಲಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು., ವಿಜಯಪುರದಲ್ಲಿ 1200 ಎಕರೆ ಪ್ರದೇಶದ ರೈತರ ಆಸ್ತಿಯ ಮೇಲೆ ವಕ್ಫ್ ಸಚಿವನ ಮೌಖಿಕ ಆದೇಶದ ಮೇರೆಗೆ ಮಂಡಳಿ ಕಣ್ಣು ಹಾಕಿದ್ದಲ್ಲದೇ ನೋಟೀಸ್ ಜಾರಿ ಮಾಡಿರುವುದು ಮೊಘಲರ ದಬ್ಬಾಳಿಕೆಯನ್ನು ನೆನಪಿಸುವಂತಿದೆ. ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಸಿಯಲು ಹವಣಿಸುತ್ತಿರುವ ವಕ್ಫ್ ಮಂಡಳಿ ಹಾಗೂ ವಕ್ಫ್ ಸಚಿವರ ಮೌಖಿಕ ಹೇಳಿಕೆಗಳು ರೈತರ ಜಮೀನು ಕಸಿಯುವ ಹುನ್ನಾರ ಕೈಬಿಟ್ಟರೆ ಒಳಿತು ಇಲ್ಲವಾದಲ್ಲಿ ರೈತರ ಸೇನೆ ಯ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ಬಿ. ಯಾದಗಿರಿ, ಜಿಲ್ಲಾದ್ಯಕ್ಷ ಮಹಾವೀರ ಲಿಂಗೇರಿ, ಗುರುಮಠಕಲ್ ಅಧ್ಯಕ್ಷ ರವಿ ರಾಠೋಡ, ಜಿಲ್ಲಾ ಉಪಾದ್ಯಕ್ಷ ಸುಭಾಸ ನಡುವಿನಕೇರಿ, ತಾಯಪ್ಪ ನಗಲಾಪುರ, ನಾರಾಯಣ ಮಜ್ಜಿಗಿ ಗುರುಮಠಕಲ್, ಬನ್ನು ದೊರಿ ಗೌಡಗೇರಿ, ಶ್ರೀನಿವಾಸ ಚಾಮನಳ್ಳಿ, ಮಾನಪ್ಪ ನಾಯಕ ಶಿರವಾಳ, ಸುನಿಲ್ ಹವಲ್ದಾರ್ ಇನ್ನಿತರರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ