ಚಿತ್ರಕಲಾ ಶಿಕ್ಷಕ ಗೆ ಬೀಳ್ಕೊಡುಗೆ

 ಚಿತ್ರಕಲೆಯಲ್ಲಿ ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರ: ಖಾಸಾಮಟ್ ಸ್ವಾಮೀಜಿ ಶ್ಲಾಘನೆ 

ಯಾದಗಿರಿ: ಚಿತ್ರಕಲಾ ಶಿಕ್ಷಕ ರಾಗಿ ಮಹತ್ ಸಾಧನೆ ಮಾಡಿ ವಯೋ ನಿವೃತ್ತಿ ಯಿಂದ ನಿರ್ಗಮಿಸಿದರು ಅವರ್ ಕೊಡುಗೆ ಅನನ್ಯ ವಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಗುರುಮಠಕಲ್ ಸರ್ಕಾರಿ ಪ್ರೌಢ ಶಾಲೆ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಬಿಲ್ಲಾರ್ ಅವರ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಕ ರ ಸಂಘ ದ ಜಿಲ್ಲಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ, ಚಿತ್ರ ಕುಂಚ ಸಂಗೀತ ನೃತ್ಯ ಬೀಳ್ಕೊಡುಗೆ ಸಮಾರಂಭ ದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಚಿತ್ರಕಲೆ ಯಲ್ಲಿ  ರಾಜ್ಯಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರವಾಗಿದೆ ಎಂದು ನುಡಿದರು.

ಅವರ ಸಾಧನೆ ಯುವ ಪೀಳಿಗೆ ಗೆ ಮಾದರಿಯಾಗಿದ್ದು ಆವರ ಸಾಧನೆ ಬಿಂಬಿಸುವ ಸ್ಮರಣ ಸಂಚಿಕೆಯನ್ನು ಹೊರತಂದಿರುವುದು ಅವರ ಸಾಧನೆಯನ್ನು ಹೇಳುತ್ತದೆ ಎಂದು ನುಡಿದರು.

ವೇದಿಕೆ ಮೇಲೆ 

ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಚಾರ್ಯ ವೃಷಭೇಂದ್ರ, ಮಲ್ಲಿಕಾರ್ಜುನ ಪೂಜಾರಿ, ಚಿತ್ರಕಲಾ ರಾಜ್ಯಾಧ್ಯಕ್ಷ

ಅಡಿವೆಪ್ಪ ಅವತಾಳೆ, ಸುಜಾತ ಆರ್., ಸಂತೋಷ್ ಕುಮಾರ್ ನೀರೇಟಿ, ರವೀಂದ್ರ ಚಿಂತನಲ್ಲಿ, ಬಿಕೆ ಶಾಂತಕ್ಕ, ಲಕ್ಷ್ಮೀಕಾಂತ್ ರೆಡ್ಡಿ,

ಬೀ. ದೇವಿಂದ್ರಪ್ಪ, ಶಾಂತಮಲ್, ಮರೆಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ಜೋಶಿ, ಕೆಎಂ ಸಂಶಿ, ಲಿಂಗನಗೌಡ, ಶಂಕರಾಚಾರ್ಯ, ಅನಿಲ್ ಕುಮಾರ್, 

ಗಂಗಾಧರ್, ಇದ್ದರು.

 ಕೆ ಎಸ್ ದಿಶಾ, ಶಾಂಭವಿ ಬಿಲ್ಹಾರ  ಭರತನಾಟ್ಯ ಪ್ರದರ್ಶನ ಮಾಡಿದರು. ನೃತ್ಯ ಸಂಗೀತ ಕ್ಕ ಸಮಾನಾಂತರವಾಗಿ ಸ್ಥಳದಲ್ಲೇ 

ಬಸವಂತ್ಪ ದೊಡ್ಡಮನಿ ಸಂಗೀತ ದ ಜೊತೆಗೆ ಭರತ ನಾಟ್ಯ ಮಾಡುವ ಬಾಲೆಯ 

 ಚಿತ್ರ ಬಿಡಿಸಿ ಗಮನ ಸೆಳೆದರು.


ಸವಿತಾ ಪ್ರಾರ್ಥನೆ ಗೀತೆ ಹಾಡಿದರು.

ಶಿವಪುತ್ರಪ್ಪ ವಿಶ್ವಕರ್ಮ 

ಸ್ವಾಗತಿಸಿದರು.ಚನ್ನಪ್ಪ ಹುಣಸಗಿ ಪ್ರಾಸ್ತಾವಿಕ ಮಾತನಾಡಿದರು, ಶೋಭಾ ಕುಂಬಾರ ನಿರೂಪಣೆ ಮಾಡಿದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು