ಜೀವನ ಒಂದು ಬ್ಯಾಲೆನ್ಸ್ ಶೀಟ್, ಹುಟ್ಟು ಆರಂಭಿಕ ಶಿಲ್ಕು ಸಾವು ಮುಕ್ತಾಯದ ಶಿಲ್ಕು: ಬಿಕೆ ಶಿವಾನಿ ಅಕ್ಕ
ಯಾದಗಿರಿ ಟೈಮ್ಸ್ ವಾರ್ತೆ | 12-01-25
ಯಾದಗಿರಿ: ಮನುಷ್ಯನ ಜೀವನವೇ ಒಂದು ಬ್ಯಾಲೆನ್ಸ್ ಶೀಟ್ ಆಗಿದೆ. ಹುಟ್ಟು ಆರಂಭಿಕ ಶಿಲ್ಕು (ಓಪನಿಂಗ್ ಬ್ಯಾಲೆನ್ಸ್), ಸಾವು ಮುಕ್ತಾಯದ ಶಿಲ್ಕು (ಕ್ಲೋಸಿಂಗ್ ಬ್ಯಾಲೆನ್ಸ್) ಆಗಿದೆ. ಮದ್ಯದಲ್ಲಿ ನಾವು ಮಾಡುವ ಉತ್ತಮ ವ್ಯಾಪಾರ ನಮ್ ಲಾಭ ನಷ್ಟಕ್ಕೆ ಕಾರಣವಾಗುತ್ತದೆ ಇದರಿಂದ ನಮ್ ಬದುಕಿನ ಮೌಲ್ಯ ನಿರ್ಭರವಾಗುತ್ತದೆ ಎಂದು ಬಿಕೆ ಶಿವಾನಿ ಹೇಳಿದರು.ನಗರದ ಹೊರವಲಯದಲ್ಲಿರುವ ಬ್ರಹ್ಮಾಕುಮಾರೀಸ್ ಕ್ಯಾಂಪಸ್ “ಅಮೃತ ಸರೋವರ” ದಲ್ಲಿ ಆಯೋಜಿಸಿದ್ದ ‘ಬ್ಯಾಲೆನ್ಸ್ ಶೀಟ್ ಆಫ್ ಲೈಫ್” ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಹುಟ್ಟಿದಾಗ ಯಾವುದೇ ಕ್ರಿಯೆ ಮಾಡದೇ ಇದ್ದರೂ ನಿಮ್ ಜನ್ಮ ಕುಂಡಲಿ ಸಿದ್ದ ಆಗುತ್ತೆ ಅಂದ್ರೆ ಅದರರ್ಥ ಪೂರ್ವಜನ್ಮದಲ್ಲಿ ಮಾಡಿದ ಕರ್ಮ ಗಳಿಂದ ಜನ್ಮ ಕುಂಡಲಿ ಸಿದ್ದವಾಗುತ್ತದೆ ಎಂದು ಹೇಳಿದರು.
ಹೀಗಾಗಿ ನಾವು ಈ ಜನ್ಮದಲ್ಲಿ ಸತ್ಕರ್ಮಗಳನ್ನೇ ಮಾಡಬೇಕು, ಮನುಷ್ಯನಲ್ಲಿರುವ ಆತ್ಮ ಪರಿಶುದ್ಧವಾದದ್ದು, ಆದರೆ ಈ ಜನ್ಮದಲ್ಲಿ ಮಾಡಬಾರದ ಪಾಪಕರ್ಮಗಳನ್ನು ಮಾಡುವ ಮೂಲಕ ನಾವೇ ಆತ್ಮವನ್ನು ಅಶುದ್ಧಗೊಳಿಸಿಕೊಳ್ಳುತ್ತೇವೆ.
ಇದನ್ನರಿತು ಪರಿಶುದ್ಧತೆಯೆಡೆಗೆ ಸಾಗಲು ಸತ್ಕಾರ್ಯಗಳನ್ನು ಮಾಡಬೇಕು ಸದ್ಭಾವನೆಗಳನ್ನೇ ಹೊಂದಿರಬೇಕು ಆತ್ಮದ ಮೂಲ ತತ್ವವೇ ಶಾಂತಿ, ಸದ್ಭಾವ ಆಗಿರುವುದನ್ನು ಮನಗಾಣಬೇಕು ಅದರಂತೆ ನಡೆಯಬೇಕಿದೆ ಎಂದು ಹೇಳಿದರು.
ಇಲ್ಲವಾದಲ್ಲಿ ಬ್ಯಾಲೆನ್ಸ್ ಶೀಟ್ ನಲ್ಲಿ ವ್ಯತ್ಯಾಸಗಳು ಕಾಣತೊಡಗುತ್ತವೆ. ಅಂತಿಮವಾಗಿ ಕ್ಲೊಜಿಂಗ್ ಬ್ಯಾಲೆನ್ಸ್ (ಮಾರ್ಚ್ ಎಂಡ್) ವೇಳೆಗೆ ನಿಮ್ಮ ವೈಯಕ್ತಿಕ ಬ್ಯಾಲೆನ್ಸ್ ಶೀಟ್ ಭಾರಿ ನಷ್ಟ (ಲಾಸ್) ಅನ್ನು ತೋರಿಸಲು ತೊಡಗುತ್ತದೆ
ಪರಮಾತ್ಮ ನಿಮ್ ಖಾತೆಯ ಲೆಕ್ಕಾ ಹಾಕಿ ನೋಡಿದಾಗ ಅಲ್ಲಿ ನಿಮ್ಮ ಒಳ್ಳೆತನ, ಕೆಟ್ಟ ತನಗಳೇ ಅದರ್ಲ್ಲಿರುತ್ತೆ ಆದ್ದರಿಂದ ನಾವು ಸದಾ ಸತ್ಕರ್ಮ, ಸತ್ಸಂಗ, ಸದ್ವಿಚಾರ, ಸದಾಚಾರ ಮಾಡಬೇಕು, ಧನಾತ್ಮಕ ಚಿಂತನೆ, ಯೋಚನೆ, ಕಾರ್ಯ ಮಾಡಬೇಕು ಅದನ್ನು ಬಿಟ್ಟು ಬೇರೆ ಮಾರ್ಗ ಹುಡುಕಿದರೆ ಕರ್ಮ ಫಲ ಬೆನ್ನು ಬಿಡವು ಎಂದು ಎಚ್ಚರಿಸಿದರು.
ಜೀವನದ ಪ್ರತಿಯೊಂದು ಸಂಬAಧಗಳು, ಸ್ನೇಹಿತರು, ಆತ್ಮೀಯರು, ಸಹೋದ್ಯೋಗಿಗಳು, ಪ್ರತಿಸ್ಪರ್ಧಿಗಳು ಎಲ್ಲರತ್ತ ನಿರಂತರ ಒಳ್ಳೇಯ ಬಿಳಿ ಚೆಂಡು ಎಸೆಯುತ್ತಲೇ ಇರಬೇಕು ಒಳ್ಳೇದು ಮಾಡುತ್ತಾ ಹೋದಂತೆ ನಮ್ ಬ್ಯಾಲೆನ್ಸ್ ಶೀಟ್ ಏರುತ್ತಾ ಹೋಗುತ್ತೆ ಕೆಟ್ಟದ್ದು ಮಾಡುವುದರಿಂದ ಇಳಿಯುತ್ತಾ ಹೋಗುತ್ತೆ ಇದನ್ನು ಅರಿಯಲು ಯತ್ನಿಸಬೇಕು ಗಳಿಸುವಾಗಲು ವ್ಯಾಪಾರ ದಲ್ಲೂ ನಮ್ಮ ನಿಯತ್ತು ಚೆನ್ನಾಗಿರಬೇಕು. ಒಳ್ಳೆಯ ವಸ್ತುವನ್ನು ಮಾರಬೇಕು ಕೆಟ್ಟದ್ದಿದೆ ಎಂದರೆ ಅದು ಬೇಡ ಎಂದು ಹೇಳಿದಾಗ ಹಣ ಕಳೆದುಕೊಳ್ಳಬಹುದು ಆದರೆ ಗ್ರಾಹಕನಿಂದ ನಿಮಗೆ ಒಂದು ಮನದಾಳದ ಹಾರೈಕೆ ಸಿಕ್ಕರೆ ಅದೇ ನಿಮ್ ಬ್ಯಾಲೆನ್ಸ ಶೀಟ್ ಅನ್ನು ವೃದ್ಧಿ ಮಾಡುತ್ತದೆ ಅದರಿಂದ ನೆಮ್ಮದಿ ಸಿಗುತ್ತದೆ ಎಂದು ನುಡಿದರು.
ವ್ಯಾಪಾರದಲ್ಲಿ ಹಣ ಅಲ್ಲ ಉತ್ತಮತೆ ಗಳಿಸಬೇಕು ಅನ್ನ ಸೇವಿಸುವಾಗ ಟಿವಿ ಮೊಬೈಲ್‌ಗಳನ್ನು ದೂರವಿಟ್ಟು ದೇವರಿಗೆ ಸ್ಮರಿಸಿ ಊಟ ಮಾಡುವುದು ಮಾಡಬೇಕು ಅಡುಗೆ ಮಾಡುವಾಗಲೂ ದೇವರ ಸ್ಮರಣೆ ಅಗತ್ಯ ಆಗ ಮಾತ್ರ ಅನ್ನ ಪ್ರಸಾದ ಆಗುತ್ತೆ ನೀರು ತೀರ್ಥ ಆಗುತ್ತೆ ಎಂದು ನುಡಿದರು.
ಈಗ್ಗೆ 20 ವರ್ಷ ಮೊದಲು ಒತ್ತಡ ಎಂಬ ಹೆಸರಿನ ಸಮಸ್ಯೆಯೇ ಇರಲಿಲ್ಲ. ಇದ್ದರೂ ತೀರ ಕ್ವಚಿತ್ತಾಗಿತ್ತು. ಆದರೆ ಇವೊತ್ತು ಅದನ್ನು ನಾವುಗಳೇ ನಾರ್ಮಲ್ ಎಂಬAತೆ ಮಾಡಿಬಿಟ್ಟಿದ್ದೇವೆ. ಇದು ಮುಂದುವರೆದು ಅತಿಯಾಗುವ ಮೊದಲು ಎಚ್ಚೆತ್ತು ಕೊಳ್ಳಬೇಕು.
ವಿಚಾರ ಬದಲಿಸದೇ ಬದುಕಿದರೆ ಖಂಡಿತಾ ಒತ್ತಡ ಎನ್ನುವುದು ಮುಂದಿನ ಸಾಂಕ್ರಾಮಿಕ ಆಗುತ್ತೆ ಅಂತ ಡಬ್ಲ್ಯೂ ಹೆಚ್ಚ್ ಓ ಹೇಳಿದೆ. ಹೀಗಾಗಿಯೇ ಡಬ್ಲೂಎಚ್‌ಓ ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನ ಪ್ರಕಟಿಸಿದೆ. ಇನ್ನಾದರೂ ಧ್ಯಾನ, ಯೋಗದತ್ತ ಗಮನಹರಿಸಬೇಕಿದೆ.
ಜಗತ್ತಿನಲ್ಲಿ ಇದೀಗ ಸಂಖ್ಯಾ ಬಹುಮತದಿಂದ ಅಕ್ರಮವನ್ನು ಪ್ರತಿಪಾದಿಸುವ, ಬೆಂಬಲಿಸುವ ಕೆಲಸ ಮಾಡುತ್ತಿದ್ದ ಕಾಲ ಮುಗೀತು ಈಗ ಏನಿದ್ದರೂ ಸರಿಯಾಗಿರುವುದರ ಪರ ನಿಲ್ಲುವ ಕಾಲ ಬಂದಿದೆ ಎಚ್ಚೆತ್ತು ನಿಲ್ಲಲು ಮುಂದಾಗಿ ಎಂದು ಹೇಳಿದ ಅವರು ಸತ್ಯದ, ಶಾಂತಿಯ ಪರವಾಗಿ ನಿಲ್ಲುವುದು ಆಗಬೇಕು.
ಇದು ಆಗಬೇಕೆಂದರೆ ನಾನು ಯಾರು ಎಂಬುದು ಅರಿಯಬೇಕು ನನ್ನ ದೇಹ, ಕೈ,ಕಿವಿ ಎಲ್ಲಾ ನನ್ನವು ಹಾಗದರೆ ನಾನು ಯಾರು? ಎನ್ನುವುದೇ ಅರಿಯಬೇಕಿದೆ ಎಂದ ಅವರು ಈ ನಾನು ಎಂಬುದು ಆತ್ಮ ಎಂದು ಹೇಳಿದರು.
ಆತ್ಮದ ಗುಣವೇ ಶಾಂತ ಗುಣ ನನ್ನಿಂದ ಎಂದಿಗೂ ಇನ್ನೊಬ್ಬರಿಗೆ ಎಂದು ತೊಂದರೆ ಕೊಡಬಾರದು ನಿರಂತವಾಗಿ ಇತರರಿಗೆ ನೆಮ್ಮದಿ, ಸುಖ ಕೊಡಬೇಕು, ನಮ್ಮ ನಿತ್ಯ ಕರ್ತವ್ಯದಿಂದಲೂ ಇತರರಿಗೆ ಸಮಸ್ಯೆ ಆಗಬಾರದು ಹಾಗೆ ಬದುಕುವುದೇ ಆತ್ಮದ ನಿಜ ಸ್ವಭಾವ ಆದರೆ ಅದನ್ನು ಬಿಟ್ಟು ಎಲ್ಲರಿಗೂ ತೊಂದರೆ ಕೊಡುವ ಆತ್ಮವಾಗಿ ಬದುಕುವ, ಬರಿ ನಕಾರಾತ್ಮಕತೆಯಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನುಡಿದರು.
ನಾವು ಸದಾ ಪಡೆಯುವವರಾಗದೆ ಕೊಡುವವರಾಗಬೇಕು ನಮ್ಮ ಭಾವನೆಗಳನ್ನು ಕೋಡುವವರಾಗಬೇಕು ಸಂಬAಧ ಗಳಲ್ಲಿ ಸ್ವಾರ್ಥ ನಿರೀಕ್ಷೆ ಗಳಿಂದ ದುಃಖ ಆಗುತ್ತೆ ಆದರೆ ಕೊಡಲು ಪ್ರಾರಂಭಿಸಿ ಆಗ ನೆಮ್ಮದಿ ಸುಖ ಸಿಗುತ್ತೆ. ಬೇರೆಯವರ ಕಾರಣ ದುಃಖ ವಾದರೆ ಅವರನ್ನು ಕ್ಷಮಿಸಬೇಕು ಇಲ್ಲವಾದರೆ ಅದು ಮನದಲ್ಲಿ ಉಳಿದರೆ ನಮಗೇ ದುಃಖ ಉಂಟು ಮಾಡುತ್ತೆ ಸೋ ಅದನ್ನು ತೆಗೆದು ಹಾಕದಿದ್ದರೆ ಅದು ನಮ್ ತಲೇಲಿ ಉಳಿದು ನಮ್ಮನ್ನೇ ಕೊರೆಯುತ್ತೆ, ಕೊನೆಗಾಣಿಸುತ್ತೆ. ಸರಳವಾಗಿ ಇರುವುದು ನಮಗೆ ನೆಮ್ಮದಿ ತರುತ್ತೆ ಇಲ್ಲದಿದ್ದರೆ ನಮಗೆ ಮತ್ತು ಸುತ್ತಮುತ್ತ ಇತರರಿಗೆ ತೊಂದರೆ ಕಟ್ಟಿಟ್ಟಬುತ್ತಿ ಎಂದು ತಿಳಿಯಿರಿ ಎಂದರು.
ಇದಕ್ಕು ಮುನ್ನ ಜರುಗಿದ ಉದ್ಘಾಟನಾ ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ಉದ್ಘಾಟಿಸಿದರು. ವೇದಿಕೆ ಮೇಲೆ ಶರಣಬಸವೇಶ್ವರ ಸಂಸ್ಥಾನದ ಶ್ರೀಮತಿ ದಾಕ್ಷಾಯಿಣಿ ಅವ್ವಾ, ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ನಟರಾಜ್, ಮುಕ್ತ ವಿವಿ ಕುಲಪತಿ ಡಾ,. ಶರಣಪ್ಪ, ಶ್ರೀಮತಿ ರಾಧಾಬಾಯಿ ಡಾ. ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ್, ಬಿಜಿ ಪಾಟೀಲ್, ಬಸವರಾಜ ಮತ್ತಿಮೂಡ,
ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಪೊಲಿಸ್ ಆಯುಕ್ತ ಶರಣಪ್ಪ, ಡಾ. ವಿಕ್ರಮ್ ಸಿದ್ದಾರಡ್ಡಿ, ಬ್ರಹ್ಮಾಕುಮಾರೀಸ್ ನ ಬಿಕೆ ವಿಜಯಾ ಅಕ್ಕ, ಸಂಯೋಜಕ ಬಿಕೆ ಪ್ರೇಮ್, ಬಿಕೆ ರಾಗಿಣಿ, ಉಷಾ, ನೀರಾ ಅಕ್ಕ ಸೇರಿ ಸಾವಿರಾರು ಜನ ಭಾಗಿಯಾದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ